Showing posts with label ಆನಂದ ಸಾಗರದ ಸೌಖ್ಯವೇಂ ನುತಿಪೆ gopalakrishna vittala. Show all posts
Showing posts with label ಆನಂದ ಸಾಗರದ ಸೌಖ್ಯವೇಂ ನುತಿಪೆ gopalakrishna vittala. Show all posts

Sunday, 1 August 2021

ಆನಂದ ಸಾಗರದ ಸೌಖ್ಯವೇಂ ನುತಿಪೆ ankita gopalakrishna vittala

ಹರಿದಾಸರ ಸ್ತುತಿ

ಆನಂದ ಸಾಗರದ ಸೌಖ್ಯವೇಂ ನುತಿಪೆ ಪ.

ಆನಂದ ಶ್ರೀ ಗುರುಗಳತಿ ಕೃಪೆಯೊಳಿತ್ತ ಅ.ಪ.


ಗಾನಲೋಲನ ಮಹಿಮೆ e್ಞÁನ ಬೋಧನೆಯಿಂದ

ನಾನಾಪ್ರಕಾರದಿಂ ವರ್ಣಿಸುತಲಿ

ಮಾನಿನಿಯ ಮನದ ಶೋಕಾಗ್ನಿ ಶಾಂತಿಯಗೈಸಿ

ಮಾನಸದಿ ನಲಿವಂತೆ ಮಮತೆಯೊಳು ಪೊರೆದ 1

ರಾಮಚಂದ್ರನ ಮಹಿಮೆ ನೇಮದಿಂದಲಿ ಪಠಿಸೆ

ಸೋಮಕಳೆ ಪೌರ್ಣಿಮ ಸ್ಥಿರವಾರದಿ

ರಾಮಪಟ್ಟಾಭಿಷೇಕದ ಮಹೋತ್ಸವ ನಡೆಸೆ

ಕಾಮಧೇನುವು ಎನುತ ಕರೆದು ಮುದವಿತ್ತು 2

ಕಲುಷ ಲಿಂಗದ ಕಳೆಯ ಕಳೆದು ಚಂದ್ರನೊಳಿಟ್ಟು ಅ-

ನಿಲ ಭಾರತಿಯರ ವ್ಯಾಪಾರ ತಿಳಿಸಿ

ಜಲಜಾಕ್ಷ ಗೋಪಾಲಕೃಷ್ಣವಿಠ್ಠಲ ಮನದಿ

ನೆಲಸಿ ಮುಕ್ತಿಯ ಕೊಡುವ ಮಾರ್ಗ ತೋರಿದರು3

***

ಆನಂದ ಸಾಗರದ ಸೌಖ್ಯವೇಂ ನುತಿಪೆ 

ಪ.

ಆನಂದ ಶ್ರೀ ಗುರುಗಳತಿ ಕೃಪೆಯೊಳಿತ್ತ 

ಅ.ಪ.


ಗಾನಲೋಲನ ಮಹಿಮೆ ಜ್ಞಾನ ಬೋಧನೆಯಿಂದ

ನಾನಾಪ್ರಕಾರದಿಂ ವರ್ಣಿಸುತಲಿ

ಮಾನಿನಿಯ ಮನದ ಶೋಕಾಗ್ನಿ ಶಾಂತಿಯಗೈಸಿ

ಮಾನಸದಿ ನಲಿವಂತೆ ಮಮತೆಯೊಳು ಪೊರೆದ 

1

ರಾಮಚಂದ್ರನ ಮಹಿಮೆ ನೇಮದಿಂದಲಿ ಪಠಿಸೆ

ಸೋಮಕಳೆ ಪೌರ್ಣಿಮ ಸ್ಥಿರವಾರದಿ

ರಾಮಪಟ್ಟಾಭಿಷೇಕದ ಮಹೋತ್ಸವ ನಡೆಸೆ

ಕಾಮಧೇನುವು ಎನುತ ಕರೆದು ಮುದವಿತ್ತು 

2

ಕಲುಷ ಲಿಂಗದ ಕಳೆಯ ಕಳೆದು ಚಂದ್ರನೊಳಿಟ್ಟು ಅ-

ನಿಲ ಭಾರತಿಯರ ವ್ಯಾಪಾರ ತಿಳಿಸಿ

ಜಲಜಾಕ್ಷ ಗೋಪಾಲಕೃಷ್ಣವಿಠ್ಠಲ ಮನದಿ

ನೆಲಸಿ ಮುಕ್ತಿಯ ಕೊಡುವ ಮಾರ್ಗ ತೋರಿದರು

3

***


***