Showing posts with label ವರಕವಿಗಳಿದ್ದಲ್ಲಿ ನರಕವಿಗಳ ಕೊಂಡಾಡಬಾರದು purandara vittala. Show all posts
Showing posts with label ವರಕವಿಗಳಿದ್ದಲ್ಲಿ ನರಕವಿಗಳ ಕೊಂಡಾಡಬಾರದು purandara vittala. Show all posts

Friday, 6 December 2019

ವರಕವಿಗಳಿದ್ದಲ್ಲಿ ನರಕವಿಗಳ ಕೊಂಡಾಡಬಾರದು purandara vittala

ಪುರಂದರದಾಸರು
ವರಕವಿಗಳಿದ್ದಲ್ಲಿ ನರಕವಿಗಳ ಕೊಂಡಾಡಬಾರದು - ಇಂಥಾಧರಣಿಯ ಕಲ್ಲಿಗೆ ಸ್ಥೀರವೆಂದು ಪೂಜೆಯಮಾಡಬಾರದು ಪ.

ಆಡಿಗೋದ ಮಡಕಿಗೆ ಜೋಡಿಸಿ ಒಲೆಗುಂಡ ಹೂಡಬಾರದುಬಡತನ ಬಂದರೆ ನಂಟರ ಬಾಗಿಲ ಸೇರಬಾರದು 1

ಮಡದಿಯ ನುಡಿಕೇಳಿ ಬಡವರ ಜಗಳಕೆಹೋಗಬಾರದು - ಬಹಳಬಡತನ ಬಂದವಳ ಕೈಯಿಂದ ಅಡಿಗೆಯ ಉಣ್ಣಬಾರದು 2

ಪಾಪಿಗಳಿದ್ದಲ್ಲಿ ರೂಪದ ಒಡವೆಯ ತೋರಬಾರದು - ಕಡುಕೋಪಿಗಳಿದ್ದಲ್ಲಿ ಅನುಕೂಲಗೋಷ್ಠಿಮಾಡಬಾರದು3

ಪರರ ನಿಂದಿಸಿ ಪರಬ್ರಹ್ಮ ರೂಪೇಂದ್ರನ ಜರೆಯಬಾರದುವರದ ಶ್ರೀ ಪುರಂದರವಿಠಲನ ಸ್ಮರಣೆಯ ಮರೆಯಬಾರದು 4
***

pallavi

varagaLiddalli narakavigaLa koNDADa bhradu dharaNiya kallige sthiravendu pUjeya mADa bhAradu

caraNam 1

aDi hOda maDakege jODisi oleguNDu hoDa bhAradu baDatana bandAga neNDira bAgila sEra bhAradu

caraNam 2

maDadhiya nuDi kELi baDvara jagaLakke hOga bhAradu bahaLa baDatana bandavaLa kaiyinda aDigeya uNNa bhAradu

caraNam 3

pApigaLiddalli rUpuLLa vastuva tOra bhAradu gOpigaLiddalli anukUla gOSTi mAtADa bhAradu

caraNam 4

parara nindisi parabrahma rUpEndrana jareya bhAradu varada shrI purandara viTTalana smaraNeya mareya bhAradu
***