ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಗಿರೀಶಾ ನಮೋ ಮಹಾದೇವಾ ನಾಗ ಚರ್ಮಾಂಬರ ಸದಾಶಿವ ನಾಗ ಭೂಷಣ ದೇವನೆ ಪ
ನೀಲ ಲೋಹಿತ ನಿರುಪಮಚರಿತಾ | ಬಾಲಚಂದ್ರನ ವೆತಾಳಿಲಿಟ್ಟಿ ಹಿಮಾಲಯತ್ಮಜಾ ಲಾಲನಾ ಭಾಲಲೋಚನ ಭಕ್ತರ ಪ್ರೀಯಾ | ನೀಲ ಗ್ರೀವಕ | ಪಾಲಿಮೂಲೋಕ ಪಾಲನಾ 1
ಗಮನ | ಭಂಗ ಮಾಡಿದಾ | ತುಂಗಮುನಿ ಮನೋ ಸಂಗನೇ | ಮಂಗಳಾತ್ಮಕ ಮಹಿಮ ಅಪಾರಾ | ಹಿಂಗ ದಂತರಂಗಲ್ಯಾಡುತಾ ಸಂಗರಹಿತ ಸಿತಾಂಗನೇ 2
ಕರುಣಾಸಿಂಧು ಕೈಲಾಸ ವಾಸೀ | ಧರಣೀಯೊಳಗ ಬೀರುವೇ || ಗುರು ಮಹಿಪತಿ - ಸುತ ಸಹಕಾರೀ | ಹರಹರಾಯನೇ ಹಾರಿಸಿ ಕಲುಷವ| ಪರಗತಿಯನೀ ತೋರುವೇ || 3
***