Wednesday, 1 September 2021

ಶ್ರೀಗಿರೀಶಾ ನಮೋ ಮಹಾದೇವಾ ನಾಗ ಚರ್ಮಾಂಬರ ಸದಾಶಿವ ನಾಗ ಭೂಷಣ ದೇವನೆ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಶ್ರೀ ಗಿರೀಶಾ ನಮೋ ಮಹಾದೇವಾ ನಾಗ ಚರ್ಮಾಂಬರ ಸದಾಶಿವ ನಾಗ ಭೂಷಣ ದೇವನೆ ಪ 


ನೀಲ ಲೋಹಿತ ನಿರುಪಮಚರಿತಾ | ಬಾಲಚಂದ್ರನ ವೆತಾಳಿಲಿಟ್ಟಿ ಹಿಮಾಲಯತ್ಮಜಾ ಲಾಲನಾ ಭಾಲಲೋಚನ ಭಕ್ತರ ಪ್ರೀಯಾ | ನೀಲ ಗ್ರೀವಕ | ಪಾಲಿಮೂಲೋಕ ಪಾಲನಾ 1 

ಗಮನ | ಭಂಗ ಮಾಡಿದಾ | ತುಂಗಮುನಿ ಮನೋ ಸಂಗನೇ | ಮಂಗಳಾತ್ಮಕ ಮಹಿಮ ಅಪಾರಾ | ಹಿಂಗ ದಂತರಂಗಲ್ಯಾಡುತಾ ಸಂಗರಹಿತ ಸಿತಾಂಗನೇ 2 

ಕರುಣಾಸಿಂಧು ಕೈಲಾಸ ವಾಸೀ | ಧರಣೀಯೊಳಗ ಬೀರುವೇ || ಗುರು ಮಹಿಪತಿ - ಸುತ ಸಹಕಾರೀ | ಹರಹರಾಯನೇ ಹಾರಿಸಿ ಕಲುಷವ| ಪರಗತಿಯನೀ ತೋರುವೇ || 3

***


No comments:

Post a Comment