Showing posts with label ಜಲಜಾಕ್ಷ ಯಾಚಿಸುವೆ ಚಲುವ ಚರಣ ತೋರೋ narahari P. Show all posts
Showing posts with label ಜಲಜಾಕ್ಷ ಯಾಚಿಸುವೆ ಚಲುವ ಚರಣ ತೋರೋ narahari P. Show all posts

Thursday, 5 August 2021

ಜಲಜಾಕ್ಷ ಯಾಚಿಸುವೆ ಚಲುವ ಚರಣ ತೋರೋ ankita narahari P

 ...

kruti by pradyumna teertha ಪ್ರದ್ಯುಮ್ನತೀರ್ಥರು

ಜಲಜಾಕ್ಷ ಯಾಚಿಸುವೆ ಚಲುವ ಚರಣ ತೋರೋ
ಸುಲಭದಿ ಹಯವದನ ಪ

[ಶಶಿಯೊಲಿರುವದರಿಧರ] ಅಕ್ಷ ಸುಬೋಧ
ಪುಸ್ತಕಧರ ವಸುಮತಿ ರಮಣನೆ ನಿನ್ನ
ಸಾಸಿರ ನಾಮದಲಿ
ಸೋಸಿಲಿ ನಾ ಪ್ರಾರ್ಥಿಸುವೆ 1

ವರವಾದಿ ಜಯದ ವಿಮುಕ್ತಿ ಪ್ರದಾತ
ಕಾಂತಿ ಸುಬುದ್ಧಿ ಸ್ಥಿರವನೆ ಅನುದಿನ ನಿನ್ನ
ಆರೆರಡು ಅ
ಕ್ಷರದ ಮಂತ್ರವನೂ ಪ್ರೇಮದಿ ನಾ 2

ಮುಖದೊಳ್ ಸಕಲಾಗಮ ವಿದ್ಯಾ
ಸುಘೋಷ ಮಾಡಿ ಆ ಕಮಲಜ ಭವಮುಖರಿಂದ
ಅಮೃತದಲಿ
[ಸ್ತುತಿಸಿಹ ಅಭಿಷಿಕ್ತನೆ] ನೀನೆನಿಸಿ ನರಹರೆ 3
***