Showing posts with label ಹರಿನಂಬಿದವರಿಗೆ ಸರಿಯೆ ಜಗದೊಳಗೆ mahipati. Show all posts
Showing posts with label ಹರಿನಂಬಿದವರಿಗೆ ಸರಿಯೆ ಜಗದೊಳಗೆ mahipati. Show all posts

Wednesday, 11 December 2019

ಹರಿನಂಬಿದವರಿಗೆ ಸರಿಯೆ ಜಗದೊಳಗೆ ankita mahipati

ಭೀಮಪಲಾಸ್ ರಾಗ , ತ್ರಿತಾಳ

ಹರಿ ನಂಬಿದವರಿಗೆ ಸರಿಯೆ ಜಗದೊಳಗೆ
ಹರಿದಾಸಾದವಗೆ ಸಕಲ ಮಾನ್ಯವಾಗೆ ||ಪ||

ಹರಿಜ್ಞಾನ ಉಳ್ಳವಗೆ ದಣಿವಿಕೆಲ್ಲಿಹುದವಗೆ
ಹರಿಧ್ಯಾನ ಉಳ್ಳವಗೆ ತಾ ದುರಿತವೆಲ್ಲಿಹುದವಗೆ ||೧||

ಹರಿನಾಮುಳ್ಳಅವಗೆ ನಾಸ್ತಿಕವೆಲ್ಲಿಹುದವಗೆ
ಹರಿಯ ದಯ ಉಳ್ಳಅವಗೆ ದೈನ್ಯವು ಎಲ್ಲಿಹುದವಗೆ

ಹರಿಯ ಭಾವಿಕಗೆ ಭವ ಉಂಟೆ ಅವಗೆ
ಹರಿಭಕ್ತ್ಯುಳ್ಳಅವಗೆ ತಾ ಭವವೆಲ್ಲಿಹುದವಗೆ ||೩||

ಹರಿದಾಸರ ದಾಸಾದ ಮಹಿಪತಿಗೆ ಸರಿ ಉಂಟೆ
ಪೂರ್ವಪುಣ್ಯದ ಫಲಶ್ರುತಿಗೆ ||೪||
***

ಹರಿ ನಂಬಿದವರಿಗೆ ಸರಿಯೆ ಜಗದೊಳು ಹರಿದಾಸಾದವಗೆ ಸಕಲ ಮಾನ್ಯವಗೆ ಪ  


ಹರಿ ಜ್ಞಾನವುಳ್ಳವಗೆ ದಣಿವಿಕೆಲ್ಲಿಹದವಗೆ ಹರಿಧ್ಯಾನ ಉಳ್ಳವಗೆ ತಾಂ ದುರಿತವೆಲ್ಲಿಹದವಗೆ 1 

ಹರಿನಾಮ ಉಳ್ಳವಿಗೆ ನಾಸ್ತಿಕವೆಲ್ಲಿಹದವಗೆ ಹರಿ ದಯುಳ್ಳವಗೆ ದನ್ಯವೆಲ್ಲಿಹದವಗೆ 2 

ಹರಿಯ ಭಾವಿಕರಿಗೆ ಭವವುಂಟೆ ಅವಗೆ ಹರಿ ಭಕ್ತಿಯುಳ್ಳವಗೆ ತಾ ಭಯ ವೆಲ್ಲಿಹದವಗೆ 3 

ಹರಿದಾಸರದಾಸಾದ ಮಹಿಪತಿಗೆ ಸರಿಯುಂಟೆ ಪೂರ್ವಪುಣ್ಯದ ಫಲಶ್ರುತಿಗೆ 4

***