Showing posts with label ನೀ ಕರುಣದಿಂದ ಪಾಲಿಸದಿದ್ದರೆ ಇನ್ನು ನಾ ಕಾಣೆ hayavadana NEE KARUNADINDA PAALISADIDDARE INNU NAA KAANE. Show all posts
Showing posts with label ನೀ ಕರುಣದಿಂದ ಪಾಲಿಸದಿದ್ದರೆ ಇನ್ನು ನಾ ಕಾಣೆ hayavadana NEE KARUNADINDA PAALISADIDDARE INNU NAA KAANE. Show all posts

Friday, 1 October 2021

ನೀ ಕರುಣದಿಂದ ಪಾಲಿಸದಿದ್ದರೆ ಇನ್ನು ನಾ ಕಾಣೆ ankita hayavadana NEE KARUNADINDA PAALISADIDDARE INNU NAA KAANE



ನೀ ಕರುಣದಿಂದ ಪಾಲಿಸದಿದ್ದರೆ ಇನ್ನುನಾ ಕಾಣೆ ಮನ್ನಿಸುವರ ಪ.


ಸಾಕಾರ ಮೂರುತಿ ಸರ್ವೋತ್ತಮನೆನೀ ಕಾಯೊ ಪರಾಕುಮಾಡದೆ ಎನ್ನನು ದೇವ ಅ.ಪ.


ಗುರುಹಿರಿಯರನು ಕಂಡು ತರಳತನದಲಿ ನಾನುಚರಣಕೆರಗದೆ ತಿರುಗಿದೆವರ ಸಕಲ ಸಂಪದವ ಬೇಡಿ ಬಯಸುತ ನಿನ್ನಸ್ಮರಣೆಯನು ಮರೆತಿದ್ದೆನೊಸ್ಮರನ ಬಾಣಕೆ ಸಿಲುಕಿ ಪರಸತಿಗೆ ಮರುಳಾಗಿದುರ್ಗತಿಗೆ ನೆಲೆಯಾದೆನೊಸಿರಿಯರಸನೆ ನಿನ್ನ ಚರಣವನು ನಂಬಿದೆನೊಕರುಣದಿಂ ಕಡೆಹಾಯಿಸೊ 1


ಆರುಮಂದಿಗಳೆಂಬ ಕ್ರೂರವೈರಿಗಳಿಂದಗಾರಾದೆನವರ ದೆಸೆಗೆಮಾರಿಹಬ್ಬದÀ ಕುರಿಯು ತೋರಣವ ಮೆಲುವಂತೆತೋರುತಿದೆ ಎನ್ನ ಮತಿಗೆಘೋರ ಸಂಸಾರವೆಂಬೋ ವಾರಿಧಿಯ ದಾಟಿಸುವಚಾರುತರ ಬಿರುದು ನಿನಗೆಮಾರನಯ್ಯನೆ ನಿನ್ನ ಚರಣವನು ನಂಬಿದೆನುಪಾರಗಾಣಿಸೊ ಎನ್ನನು 2


ಹಲವು ಜನ್ಮಗಳಲ್ಲಿ ಬಲುನೊಂದು ಬಾಯಾರಿತೊಳತೊಳಲಿ ಬಳಲುತಿಹೆನುಸಲೆ ಉದರ ಪೋಷಣೆಗೆ ತಲೆಹುಳುಕ ನಾಯಂತೆಹಲವು ಮನೆ ತಿರುಗುತಿಹೆನೊಜಲದ ಮೇಲಿನ ಗುಳ್ಳೆಯಂತಿಪ್ಪ ಈ ದೇಹನೆಲೆಯೆಂದು ನೆಚ್ಚುತಿಹೆನೊಜಲಜನಾಭನೆ ನಿಮ್ಮ ಮಹಿಮೆಯನು ಪೊಗಳುವೆನುಚೆಲುವ ಶ್ರೀ ಹಯವದನ ರನ್ನ 3

***