ankita janakiramana
ರಾಗ: ಕಮಾಚ್ ತಾಳ: ಆದಿ
ರಾಘವೇಂದ್ರಯೆನ್ನಿರೋ ಶ್ರೀವರ ಗುರು
ರಾಘವೇಂದ್ರಯೆನ್ನಿರೋ ಪ
ರಾಘವೇಂದ್ರಯೆಂದು ಭಕುತಿಲಿ ಕರೆದರೆ
ಅಘನಾಶನವೆಂದು ನಂಬಿ ಬದುಕಿರೋ ಅ. ಪ
ಮಾಯಾದ ಸಂಸಾರ ವಾರಿಧಿಯಲಿ ಪುಟ್ಟಿ
ಕಾಯವು ಸ್ತಿರವೆಂದು ನಂಬಿ ಕೆಟ್ಟು
ಆಯಾಸ ಪಡುವರ ಉಪಾಧಿ ಕಳಿಯೆಂದು
ತೋಯಜಾಕ್ಷನ ಪಾದದ್ವಂದ್ವ ಭಜಿಸುವ 1
ಸಂತಾನ ಸಂಪತ್ತು ಭಕ್ತಿವೈರಾಗ್ಯವ
ಸಂತೋಷದಿಯಿತ್ತು ಸಲಹುವ ಧೊರೆಯ
ಸಂತತ ಭಕುತರ ಸಂತಾಪಗಳ ಕಳೆದು
ನಿತ್ಯ ಸನ್ನಿಧಿ ಸೇವೆಯಿತ್ತು ಸಂರಕ್ಷಿಸುವ 2
ಮನುಜರ ತಪ್ಪುಗಳ ಮನ್ನಿಸಿ ಸಲಹುವ
ಭಾನುಕುಲಾಂಬುಧಿ ಸೋಮನಾದ ಶ್ರೀ
ಜಾನಕಿರಮಣನ ಗುಣಪರಿಪೂರ್ಣನ
ಮೌನದಿ ಧ್ಯಾನಿಪ ರಾಘವೇಂದ್ರ ಗುರು 3
***