Monday, 6 September 2021

ರಾಘವೇಂದ್ರ ಎನ್ನಿರೋ ಶ್ರೀವರ ಗುರು ankita janakiramana

 ankita janakiramana

ರಾಗ: ಕಮಾಚ್  ತಾಳ: ಆದಿ


ರಾಘವೇಂದ್ರಯೆನ್ನಿರೋ ಶ್ರೀವರ ಗುರು 

ರಾಘವೇಂದ್ರಯೆನ್ನಿರೋ 


ರಾಘವೇಂದ್ರಯೆಂದು ಭಕುತಿಲಿ ಕರೆದರೆ

ಅಘನಾಶನವೆಂದು ನಂಬಿ ಬದುಕಿರೋ  ಅ. ಪ


ಮಾಯಾದ ಸಂಸಾರ ವಾರಿಧಿಯಲಿ ಪುಟ್ಟಿ

ಕಾಯವು ಸ್ತಿರವೆಂದು ನಂಬಿ ಕೆಟ್ಟು

ಆಯಾಸ ಪಡುವರ ಉಪಾಧಿ ಕಳಿಯೆಂದು

ತೋಯಜಾಕ್ಷನ ಪಾದದ್ವಂದ್ವ ಭಜಿಸುವ  1

ಸಂತಾನ ಸಂಪತ್ತು ಭಕ್ತಿವೈರಾಗ್ಯವ

ಸಂತೋಷದಿಯಿತ್ತು ಸಲಹುವ ಧೊರೆಯ

ಸಂತತ ಭಕುತರ ಸಂತಾಪಗಳ ಕಳೆದು

ನಿತ್ಯ ಸನ್ನಿಧಿ ಸೇವೆಯಿತ್ತು ಸಂರಕ್ಷಿಸುವ 

ಮನುಜರ ತಪ್ಪುಗಳ ಮನ್ನಿಸಿ ಸಲಹುವ

ಭಾನುಕುಲಾಂಬುಧಿ ಸೋಮನಾದ ಶ್ರೀ

ಜಾನಕಿರಮಣನ ಗುಣಪರಿಪೂರ್ಣನ

ಮೌನದಿ ಧ್ಯಾನಿಪ ರಾಘವೇಂದ್ರ ಗುರು  3

***


No comments:

Post a Comment