Monday, 6 September 2021

ಸಿರಿಮಂತ್ರಾಲಯರಾಯರೇ ಶರಣಯ್ಯ ankita tandevenkatesha vittala

ankita ತಂದೆವೆಂಕಟೇಶವಿಠಲ

ರಾಗ: ಅಠಾಣ/ಕಲ್ಯಾಣಿ ತಾಳ: ಆದಿ


ಸಿರಿಮಂತ್ರಾಲಯರಾಯರೇ ಶರಣಯ್ಯ 

ಮದ್ಗುರುರಾಘವೇಂದ್ರಾರ್ಯರೇ


ಚಿರಮುದಿತಭೂಸುರ ಚಕೋರಕ

ಶರಮೃಗೋದರ ವರಕೃಪಾಕರ ಅ.ಪ


ಅನುಮಾನತೀರ್ಥಾಗಮವನಧಿಸೋಮ

ಮೌನಿಕುಲಾಭಿರಾಮ ಅನುನಯಪ್ರೇಮ

ಜಾನಕೀಶಧ್ಯಾನ ಶೃತಿಸಂಧಾನಮಾನಸದೀನವತ್ಸಲ 1

ಕರುಣೀಗಳೊಳು ನಿನಗೆಣೆ ನಾನೆಲ್ಲು ಕಾಣೆ

ಪ್ರಣತಾಭಿರಕ್ಷಾಮಣೇ ಪಾಲಿಸೆನ್ನಾಣೆ

ನಿರತಿಶಯ ನಿರವದ್ಯ ನಿರ್ಮಲ ಪರಮಹಂಸ ಪ್ರಹ್ಲಾದನಂಶದ 2

ಶ್ರೀಸುಧಾಸೌರಭವ ಪ್ರಸರಣವಿಭವ

ವ್ಯಾಸಾದಿ ರೂಪೋದ್ಭವ ಸುಧೀಂದ್ರಸಂಭವ

ಮೇಶ ತಂದೆವೆಂಕಟೇಶವಿಠಲನ ಭಾಸ್ವದಂಘ್ರಿಕುಶೇಶಯಾಶ್ರಿತ 3

***

ಚಿರ ಮುದಿತ=ಸದಾ ಸಂತೋಷವಾಗಿರುವ; 

ಚಕೋರಕ=ಚಕ್ರವಾಕ ಪಕ್ಷಿಗಳು; 

ಶರ ಮೃಗೋದರ=ಶರದೃತುವಿನ ಚಂದ್ರ; ಪ

್ರಣತಾಭಿ ರಕ್ಷಾಮಣೇ=ಶರಣಾಗತ ರಕ್ಷಕ ಶ್ರೇಷ್ಠ; 

ನಿರವದ್ಯ=ಕಳಂಕರಹಿತ; ಕುಶೇಶಯ=ಕಮಲ;


No comments:

Post a Comment