Showing posts with label ದುರಿತ ದುರ್ಗತಿಗೆ ಆವಾನಂಜನೊ vijaya vittala. Show all posts
Showing posts with label ದುರಿತ ದುರ್ಗತಿಗೆ ಆವಾನಂಜನೊ vijaya vittala. Show all posts

Thursday, 17 October 2019

ದುರಿತ ದುರ್ಗತಿಗೆ ಆವಾನಂಜನೊ ankita vijaya vittala

ದುರಿತ ದುರ್ಗತಿಗೆ ಆವಾನಂಜನೊ
ಹರಿಯ ಕರುಣವೆಂಬ ಕವಚ ತೊಟ್ಟಿರಲಿಕ್ಕೆ ಪ

ಮಲಗಿ ಹೊರಳನೇಕೆ ಕುಳಿತುಕೊಂಡಿರನೇಕೆ
ಬಲುದೂರ ತಿರುಗಾಡಿ ಬಪ್ಪನೇಕೆ
ಮಲಿನ ವಸನವ ಪೊದ್ದು ಮೋರೆ ತೊಳಿಯನೇಕೆ
ಪಾದ ನೆಳಲು ಸೇರಿದವ 1

ಸ್ನಾನ ಸಂಧ್ಯಾ ಮೌನ ಮಾಡದೆ ಇರನೇಕೆ
ಕಾನÀನದಲಿ ಬಂದು ಸೇರನೇಕೆ
ದಾನ ಧರ್ಮಂಗಳ ಮಾಡದೆ ಇರನೇಕೆ
ದಾನವಾರಿಯ ಕಾಣುತಲಿಪ್ಪವ 2

ಮಡಿ ಉಡದೆ ಉಣನೇಕೆ ಅಡಿಗೆ ನೇಮನವೇಕೆ
ಅಡಿಗಡಿಗೆ ಜಪಮಣಿ ಎಣಿಸನೇಕೆ
ನಡೆಯುತ ಪಥದೊಳು ತಿನ್ನಲ್ಲಾ ಮೆಲ್ಲನೇಕೆ
ಪೊಡವೀಶ ಶ್ರೀ ಹರಿಯ ಅಡಿಗಳ ಬಲ್ಲವಾ 3

ಓದದೆ ಇರನೇಕೆ ವೇದ ಪಠಿಸನೇಕೆ
ವೇದಮಂತ್ರ ರಚಿಸದರನೇತಕೆ
ಓದನವೀಯದೆ ಬಾಳುತಲಿ ಇರನೇಕೆ
ಮಾಧವನ ಚರಣಾರಾಧನೆ ಮಾಳ್ಪ 4

ತೀರ್ಥ ತಿರುಗನೇಕೆ ಯಾತ್ರಿ ಚರಿಸನೇಕೆ
ವ್ಯರ್ಥ ದಿವಸವೆಂದು ಅನಿಸಲೇಕೆ
ಆರ್ಥಿಯನ್ನು ನೋಡಿ ಆಟ ಆಡುವನೇಕೆ
ತೀರ್ಥಪದನ ದಿವ್ಯತೀರ್ಥ ಬಯಸುವವ 5

ವ್ರತವು ಮಾಡನೇಕೆ ಕಥಿಯ ಕೇಳನೇಕೆ
ಸತಿಯ ಸಂಗಡ ನಿತ್ಯರಮಿಸನೇಕೆ
ಚತುರ ಸಾರೆ ಉಂಡು ಹಾಗೇ ಇರನೇಕೆ
ಪತಿತಪಾವನನಂಘ್ರಿ ಮತಿಯಲ್ಲಿ ನೋಳ್ಪನಾ6

ದುರಿತವೆಂಬೋದೆಂತು ಬಿಳಿದೊ ಹಸರೊ ಕೆಂಪೊ
ಕರದೊ ಮತ್ತಾವದೋ ಅದರ ವರ್ಣಾ
ದುರಿತಾರಿ ವಿಜಯವಿಠ್ಠಲನ್ನದಾಸಗೆ ತನ್ನ-
ತೊರೆದು ಕಾಣೊ ಹಣೆ ನೋಡದೆ ಮಹಾ 7
***********