..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಬಾರೋ ಬಾರೋ ಬಾರೋ ಹರಿ
ತೋರೋ ತೋರೋ ಮುಖವ ದೊರಿ ಪ
ಧೀರನೆ ಬಹುಗಂಭೀರನೆ ಗೋರಸ
ಚೋರನೆ ಗೋಪಿ ಜಾರನೆ ಬ್ಯಾಗನೆ
ವೀರಾಧಿವೀರನೆ ಎನ್ನ ವಾರೆ ನೋಟ ನೋಡುವರೆ
ಗಾರು ಮಾಡದಲೆ ಮನ ಸೇರಿ ಸುಖಬಡಿಸಲು ಅ.ಪ.
ಭೃಂಗಗಳ್ಯಾತಕೆ ಕೂಗಿದವೊ ಅಂಗಜ ಶರಗಳು ಸೇರಿದವೊ
ರಂಗನೆ ಗರುಡ ತುರಂಗನೆ ವಿಧೃತ ರಥಾಂಗನೆ ಸಜ್ಜನ ಸಂಗನೆ ಬ್ಯಾಗನೆ ಮಂಗಳರೂಪನೆ ಬೆಳುದಿಂಗಳೊಳು ನೀನು
ಪಿಳಂಗೊಳವಿನೂದಲು ಆ ರಂಗ ಎನ್ನ ಬಿಡಿಸಿದ 1
ಕಾವರೆ ನಿನ್ಹೊರತಿನಾರೊ
ಭಾವಜಪಿತ ಮಂದಿರ ಸೇರೊ
ದೇವನೆ ಭಕುತರ ಕಾವನೆ ವರಗಳ
ನೀವನೆ ರಿಪುವನದಾವನೆ ಬ್ಯಾಗನೆ
ದೇವಾದಿ ದೇವನೆ ಎನ್ನ
ಕಾವನು ನೀನಲ್ಲದೆ ಇ
ನ್ಯಾವನು ಈ ಭೂಮಿಯೊಳ
ಗೀವನು ಕಾಣಿನೊ ನಾನೊಬ್ಬ2
ಈ ಸಮಯದಿ ಪರಿಪಾಲಿಪರ್ಯಾರೋ
ವಾಸುದೇವವಿಟ್ಠಲ ನೀ ತೋರೋ
ಶ್ರೀಶನೆ ಸುಂದರಹಾಸನೆ ಮುನಿ ಮನ
ವಾಸನೆ ಶತರವಿ ಭಾಸನೆ ಬ್ಯಾಗನೆ
ಹಾಸುಮಂಚದೊಳು ಹುವ್ವಿನ
ಹಾಸಿಕಿಯೊಳು ಮಲಗಿ
ಬ್ಯಾಸರಗೊಂಡೆನು ಪರಿ
ಹಾಸವ ಮಾಡದೆ ಬ್ಯಾಗ 3
***