ಹರಪನಹಳ್ಳಿ ಭೀಮವ್ವ
ಕಳವು ಕಲಿಸಿದರ್ಯಾರೊ ನಿನಗೆ ಕಂಜನಾಭನೆ ।।ಪ॥
ಕೇರಿ ಕೇರಿ ಮನೆಗಳಲ್ಲಿ
ಕ್ಷೀರ ಗಡಿಗೆಯನೊಡಿವರೇನಲ್ಲಿ
ಚೋರತನವ ನೀ ಕಲಿತಿಹುದೆಲ್ಲಿ
ಜಾರನೆನಿಸಿಕೊಂಬುವುದು ಕೇಳಿ ಬಲ್ಲೆ ।।೧।।
ಅಟ್ಟದ ಮ್ಯಾಲಿಟ್ಟಿದ್ದ ಬೆಣ್ಣಿ
ಚಟ್ಟಿಗಿಯ ಒಡೆದಾಕಳ ಕಣ್ಣಿ
ಕಟ್ಟಿ ಜುಟ್ಟ ಇವರ ಮನೆ ಹೆಣ್ಣಿ-
ಗಿಟ್ಟು ಮಾಡುವರೆ ಕಣ್ಣು ಸೋನ್ನಿ ।।೨।।
ಬಡವರ ಮನಿ ಅನ್ನದಲಿಷ್ಟು
ತುಡುಗುತನವ ನೀ ಮಾಡುವುದೆಷ್ಟು
ಪಿಡಿಯಲವರಿಗೆ ಬರುವುದತಿ ಸಿಟ್ಟು
ಹಿಡಿದು ಹಾಕೋರು ನಿನಗೊಂದು ಪೆಟ್ಟು ।।೩।।
ಕಡೆದ ಬೆಣ್ಣೆ ಕಾಸಿದ ತುಪ್ಪ
ಕೊಡುವೆನ್ಹಾಲು ನೀ ಕುಡಿಯದಲ್ಯಾಕೊ
ಮಡದಿಯರ ಸರಿ ನಿಂಗೇನು ಬೇಕೊ
ಕೇಳಿ ಬ್ಯಾಸರಾದೆನು ನಿನ್ನ ವಾಕು ।।೪।।
ಬಣ್ನದ್ವಲ್ಲಿ ಛಾದರ ಹೊದ್ದು
ಅಣ್ಣ ರಾಮರಲ್ಯಾಡದೆ ಇದ್ದು
ಹೆಣ್ಣುಮಕ್ಕಳುಡುವ ಸೀರಿ ಕದ್ದು
ಇನ್ನು ಮರನೇರುವುದೇನು ಮುದ್ದು ।।೫।।
ನಂದಗೋಪನ ಮುಂದ್ಹೇಳಿ ಸಿಟ್ಟು
ಇಂದು ಬಿಡಿಸುವೆ ಭೀಮೇಶ ಕೃಷ್ಣ
ಮಂದಿ ಮಕ್ಕಳೊಳಗೆ ನೀನೆ ಶ್ರೇಷ್ಠ ಹಾ-
ಗೆಂದು ಬೇಡಿಕೊಂಬುವುದೊ ನೀಡಿಷ್ಟ ।।೬।।
***
Kalavu kalisidaryaro ninage kanjanabane ||pa||
Keri keri manegalalli
Kshira gadigeyanodivarenalli
Coratanava ni kalitihudelli
Jaranenisikombuvudu keli balle ||1||
Attada myalittidda benni
Chattigiya odedakala kanni
Katti jutta ivara mane henni-
Gittu maduvare kannu sonni ||2||
Badavara mani annadalishtu
Tudugutanava ni maduvudeshtu
Pidiyalavarige baruvudati sittu
Hididu hakoru ninagomdu pettu ||3||
Kadeda benne kasida tuppa
Koduvenhalu ni kudiyadalyako
Madadiyara sari nimgenu beko
Keli byasaradenu ninna vaku ||4||
Bannadvalli cadara hoddu
Anna ramaralyadade iddu
Hennumakkaluduva siri kaddu
Innu maraneruvudenu muddu ||5||
Namdagopana mumd~heli sittu
Imdu bidisuve bimesa krushna
Mamdi makkalolage nine sreshtha ha-
Gemdu bedikombuvudo nidishta ||6||
***
ಕಳವು ಕಲಿಸಿದರ್ಯಾರೊ ನಿನಗೆ ಕಂಜನಾಭನೆ ಪ
ಕೇರಿಕೇರಿ ಮನೆಗಳಲ್ಲಿ
ಕ್ಷೀರ ಗಡಿಗೆಯನೋಡಿವರೇನಲ್ಲಿ
ಚೋರತನವ ನೀ ಕಲಿತಿಹುದೆಲ್ಲಿ
ಜಾರನೆನಿಸಿಕೊಂಬುವುದು ಕೇಳಿ ಬಲ್ಲೆ 1
ಅಟ್ಟದ ಮ್ಯಾಲಿಟ್ಟಿದ್ದ ಬೆಣ್ಣೆ
ಚಟ್ಟಿಗಿಯ ಒಡೆದಾಕಳ ಕಣ್ಣಿ
ಕಟ್ಟಿ ಜುಟ್ಟ ಇವರÀ ಮನೆ ಹೆಣ್ಣಿ
ಗಿಟ್ಟು ಮಾಡುವರೆ ಕಣ್ಣು ಸೊನ್ನಿ2
ಬಡವರ ಮನೆ ಅನ್ನದಲಿಷ್ಟು
ತುಡುಗುತನವ ನೀ ಮಾಡುವುದೆಷ್ಟು
ಪಿಡಿಯರವರು ಬರುವುದತಿ ಸಿಟ್ಟು
ಹಿಡಿದು ಹಾಕೋರು ನಿನಗೊಂದು ಪೆಟ್ಟು3
ಕಡೆದ ಬೆಣ್ಣೆ ಕಾಸಿದ ತುಪ್ಪ
ಕೊಡುವೆನ್ಹಾಲು ನೀ ಕುಡಿಯದಲ್ಯಾಕೊ
ಮಡದಿಯರ ಸರಿ ನಿನಗೇನು ಬೇಕೊ
ಕೇಳಿ ಬ್ಯಾಸರಾದೆನು ನಿನ್ನ ವಾಕು 4
ಬಣ್ಣದ್ವಲ್ಲಿ ಛಾದರ ಹೊದ್ದು
ಅಣ್ಣ ರಾಮರಲ್ಲ್ಯಾಡದೆ ಇದ್ದು
ಹೆಣ್ಣು ಮಕ್ಕಳುಡುವ ಸೀರೆ ಕದ್ದು
ಇನ್ನು ಮರನೇರುವುದೇನು ಮುದ್ದು 5
ನಂದಗೋಪನ ಮುಂದ್ಹೇಳಿ ಸಿಟ್ಟು
ಇಂದು ಬಡಿಸುವೆ ಭೀಮೇಶ ಕೃಷ್ಣ
ಮಂದಿ ಮಕ್ಕಳೊಳಗೆ ನೀನೆ ಶ್ರೇಷ್ಠ ಹಾ-
ಗೆಂದು ಬೇಡಿ ಕೊಂಬುವುದೊ ನೀಡಿಷ್ಟ6
****