Showing posts with label ಶ್ರೀಲಕ್ಷ್ಮೀ ಭೂಮಾ ನೃಸಿಂಹನ್ನ prasannashreenivasa. Show all posts
Showing posts with label ಶ್ರೀಲಕ್ಷ್ಮೀ ಭೂಮಾ ನೃಸಿಂಹನ್ನ prasannashreenivasa. Show all posts

Friday, 27 December 2019

ಶ್ರೀಲಕ್ಷ್ಮೀ ಭೂಮಾ ನೃಸಿಂಹನ್ನ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ಆಂಗೀರಸ ನಾಮ ಸಂವತ್ಸರ ಸ್ತೋತ್ರ 


ಶ್ರೀ ಲಕ್ಷ್ಮೀ ಭೂಮಾ ನೃಸಿಂಹನ್ನ ಆರಾಧಿಸಿ ಶೀಲ ಉದ್ಭಕ್ತಿಯಲಿ ಸ್ತುತಿಸುವ ಶನೈಶ್ಚರ ಇಳೆಯಲ್ಲಿ ವಿಂಧ್ಯಾಚಲ ದಕ್ಷಿಣ ದೇಶದಲಿ ಹೊಳೆಯುತಿಹÀ ರಾಜನಾಗಿ ಆಂಗೀರಸ ಸಂವತ್ಸರದಿ ತಂ ನಮೋ ಪ 


ಸೂರ್ಯಛಾಯಾಸೂನು ಸೂರಿ ಸಾಧುಗಳಿಗೆ ಕಾರ್ಯಾನುಕೂಲ ಸರ್ವೇಷ್ಟ ಪೂರೈಸುವನು ಕ್ರಿಯಾ ರೂಪದಿ ವಿಷ್ಣು ವರ ವಾಯು ದೇವನೊಳು ಇರುತ ಸಂವತ್ಸರ ನಾಯಕರೋಳು ಕ್ರಿಯೆಗಳ ಮಾಡಿಸುವ 1 

ನರಹರಿಯ ಒಲುಮೆ ಶನಿರಾಜನಲಿ ಬಹು ಉಂಟು ನರಕ್ಷೇಮೋಪಾಯ ಅಂದು ದಶರಥಗೆ ಪೇಳಿದ ಪಾದ್ಮದಿ ಹರಿನಾಮೋಚ್ಛಾರಣೆ, ಶನಿಕೃತ ನೃಹರಿ ಸ್ತೋತ್ರ ಪಠಣದಿ ಪಾರುಗಾಣುವರು ಸಾಧು ಸಜ್ಜನ ಭಕ್ತರು 2 

ಅನಂದಮಯ ಹರಿಯು ಆಂಗೀರಸ ಸಂವತ್ಸರದಿ ಜನರಿಗೆ ಯೋಗ್ಯತಾನುಸಾರ ಸುಖವನ್ನೇ ಈವ ಜನರಿಗೆ ಆದಿಯಲಿ ಸುಕ್ಷೇಮ ಕಾಲವು ಕಥೆಯಲ್ಲಿ ದುರ್ಭಿಕ್ಷ ನೂತನ ವಸ್ತು ಉತ್ಪತ್ತಿ, ಧಾನ್ಯಾದಿಗಳು ಸಮೃದ್ಧಿ ಇದ್ದರೂ ಕ್ಷಾಮ 3 

ಬ್ರಹ್ಮಪಾರ ಸ್ತೋತ್ರವ ಕಂಡು ಋಷಿಗೆ ಉಪದೇಶಿಸಿದ ಬ್ರಾಹ್ಮಣೌಷಧಿ ಪತಿಯು ಸುಧಾಮೂರ್ತಿ ಚಂದ್ರ ಮಹಿಗೆ ಅಹ್ಲಾದವ ನೀವನು ಮಂತ್ರಿಸ್ಥಾನವ ವಹಿಸಿ ಅಜಸ್ಪತಿ, ಬೃಹಸ್ಪತಿ, ಶನಿ ಕುಜ ಗೋಪಾಲ ಸರ್ವರಿಗೂ ನಮೋ ನಮೋ 4 

ರಸನೆ ಲೋಲ್ಯಾಟ ವಾಹನ ಆಟೋಪ ಹೆಚ್ಚಿದರೂ ರಸನೆ ಸಹ ಭಕ್ತಿಯೂ ಸಹ ಹೆಚ್ಚುವುದು ಮದುವೆ ಜನನ ಕಡಿಮೆ ಶಾಸ್ತ್ರ, ವಿಜ್ಞಾನ, ವಿಷ್ಣು ಸಹಸ್ರನಾಮ ಪ್ರತಿಪಾದ್ಯ ಸರಸಿಜಾನನ ತಾತ ಪ್ರಸನ್ನ ಶ್ರೀನಿವಾಸನಲಿ ಶರಣು ಶರಣಾದೆ 5 

ಶ್ರೀ ಲಕ್ಷ್ಮೀ ಭೂಮಾ ನೃಸಿಂಹನ್ನ ಆರಾಧಿಸಿ ಶೀಲ ಉದ್ಭಕ್ತಿಯಲಿ ಸ್ತುತಿಸುವ ಶನೈಶ್ಚರ ಇಳೆಯಲ್ಲಿ ವಿಂಧ್ಯಾಚಲ ದಕ್ಷಿಣ ದೇಶದಲಿ ಹೊಳೆಯುತಿಹ ರಾಜನಾಗಿ ಆಂಗೀರಸ ಸಂವತ್ಸರದಿ ತಂ ನಮೋ

***

by ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಆಂಗೀರಸ ನಾಮ ಸಂವತ್ಸರ ಸ್ತೋತ್ರ

ಶ್ರೀ ಲಕ್ಷ್ಮೀ ಭೂಮಾ ನೃಸಿಂಹನ್ನ ಆರಾಧಿಸಿಶೀಲ ಉದ್ಭಕ್ತಿಯಲಿ ಸ್ತುತಿಸುವ ಶನೈಶ್ಚರಇಳೆಯಲ್ಲಿ ವಿಂಧ್ಯಾಚಲ ದಕ್ಷಿಣ ದೇಶದಲಿ ಹೊಳೆಯುತಿಹÀರಾಜನಾಗಿ ಆಂಗೀರಸ ಸಂವತ್ಸರದಿ ತಂ ನಮೋ ಪ

ಸೂರ್ಯಛಾಯಾಸೂನುಸೂರಿಸಾಧುಗಳಿಗೆಕಾರ್ಯಾನುಕೂಲ ಸರ್ವೇಷ್ಟ ಪೂರೈಸುವನುಕ್ರಿಯಾ ರೂಪದಿ ವಿಷ್ಣುವರವಾಯು ದೇವನೊಳು ಇರುತಸಂವತ್ಸರ ನಾಯಕರೋಳು ಕ್ರಿಯೆಗಳ ಮಾಡಿಸುವ 1

ನರಹರಿಯ ಒಲುಮೆ ಶನಿರಾಜನಲಿ ಬಹು ಉಂಟುನರಕ್ಷೇಮೋಪಾಯ ಅಂದು ದಶರಥಗೆ ಪೇಳಿದ ಪಾದ್ಮದಿಹರಿನಾಮೋಚ್ಛಾರಣೆ, ಶನಿಕೃತ ನೃಹರಿ ಸ್ತೋತ್ರ ಪಠಣದಿಪಾರುಗಾಣುವರು ಸಾಧು ಸಜ್ಜನ ಭಕ್ತರು 2

ಅನಂದಮಯ ಹರಿಯು ಆಂಗೀರಸ ಸಂವತ್ಸರದಿಜನರಿಗೆ ಯೋಗ್ಯತಾನುಸಾರ ಸುಖವನ್ನೇಈವಜನರಿಗೆ ಆದಿಯಲಿ ಸುಕ್ಷೇಮ ಕಾಲವು ಕಥೆಯಲ್ಲಿ ದುರ್ಭಿಕ್ಷನೂತನ ವಸ್ತು ಉತ್ಪತ್ತಿ, ಧಾನ್ಯಾದಿಗಳು ಸಮೃದ್ಧಿ ಇದ್ದರೂ ಕ್ಷಾಮ 3

ಬ್ರಹ್ಮಪಾರ ಸ್ತೋತ್ರವ ಕಂಡು ಋಷಿಗೆ ಉಪದೇಶಿಸಿದಬ್ರಾಹ್ಮಣೌಷಧಿ ಪತಿಯು ಸುಧಾಮೂರ್ತಿ ಚಂದ್ರಮಹಿಗೆ ಅಹ್ಲಾದವ ನೀವನು ಮಂತ್ರಿಸ್ಥಾನವ ವಹಿಸಿಅಜಸ್ಪತಿ, ಬೃಹಸ್ಪತಿ, ಶನಿಕುಜಗೋಪಾಲಸರ್ವರಿಗೂ ನಮೋ ನಮೋ 4

ರಸನೆ ಲೋಲ್ಯಾಟವಾಹನಆಟೋಪ ಹೆಚ್ಚಿದರೂರಸನೆ ಸಹ ಭಕ್ತಿಯೂ ಸಹ ಹೆಚ್ಚುವುದು ಮದುವೆ ಜನನ ಕಡಿಮೆಶಾಸ್ತ್ರ, ವಿಜ್ಞಾನ, ವಿಷ್ಣು ಸಹಸ್ರನಾಮ ಪ್ರತಿಪಾದ್ಯಸರಸಿಜಾನನತಾತಪ್ರಸನ್ನ ಶ್ರೀನಿವಾಸನಲಿ ಶರಣು ಶರಣಾದೆ5

ಶ್ರೀ ಲಕ್ಷ್ಮೀ ಭೂಮಾ ನೃಸಿಂಹನ್ನ ಆರಾಧಿಸಿಶೀಲ ಉದ್ಭಕ್ತಿಯಲಿ ಸ್ತುತಿಸುವ ಶನೈಶ್ಚರಇಳೆಯಲ್ಲಿ ವಿಂಧ್ಯಾಚಲ ದಕ್ಷಿಣ ದೇಶದಲಿ ಹೊಳೆಯುತಿಹರಾಜನಾಗಿ ಆಂಗೀರಸ ಸಂವತ್ಸರದಿ ತಂ ನಮೋ ಪ
******