Showing posts with label ಸದಾ ನಿನ್ನ ಭಜಿಪೆ ದಯದಿ ಪದಾಯುಗವ ನೀಡಿನ್ನಾ gurujagannatha vittala. Show all posts
Showing posts with label ಸದಾ ನಿನ್ನ ಭಜಿಪೆ ದಯದಿ ಪದಾಯುಗವ ನೀಡಿನ್ನಾ gurujagannatha vittala. Show all posts

Wednesday, 1 September 2021

ಸದಾ ನಿನ್ನ ಭಜಿಪೆ ದಯದಿ ಪದಾಯುಗವ ನೀಡಿನ್ನಾ ankita gurujagannatha vittala

 ..

ಸದಾ ನಿನ್ನ ಭಜಿಪೆ ದಯದಿ

ಪದಾಯುಗವ ನೀಡಿನ್ನಾ ಪ


ಹೃದಾಯದಲಿ ನಿಂತು ಮುದಾವ ನೀಡುತ

ಬುಧಾಮತಿಯನಿತ್ತು ಬದೀಗನಾಗಿಪ್ಪೆ ಅ.ಪ

ಉದಾಧಿಶಯನ ಎನ್ನ ವದÀನದಿ

ಸದಾ ನಿಂತು ಘನ್ನಾ ರನ್ನಾ

ಪದಾದಿವಚನವ ಸದಾಯಭಾವದಿ

ಮುದಾದಿ ಮುಖದಲಿ ಉದಾಯಗೈಸಿದಿ 1


ಮದಾಕರಿಯ ಭಂಗಾ ಮಾಡಿ

ಸದಾ ನಿ ನಿಸ್ಸಂಗಾ ರಂಗಾ

ವದಾಗಿ ನೀನಂದು ಸುಧಾಮ ಗೊಲಿದೆಯೆ

ವಿದಾರಿತಾರಿಯೆ ಪದೂಮನಾಭನೆ 2


ನೀತಾ ಗುಣಗಳನ್ನಾ ಇನ್ನಾ

ತಾತಾ ವ್ಯಕ್ತ ಮಾಡೊ ಘನ್ನಾ

ದಾತಾ ಗುರುಜಗನ್ನಾಥವಿಠಲ ನಿಜ

ದೂತಾನೆನಿಪ ಎನ್ನ ಮಾತು ಲಾಲಿಸೊ ಸ್ವಾಮೀ 3

***