Showing posts with label ಸ್ಮರಿಸು ಸಂತತ ಹರಿಯನು jagannatha vittala. Show all posts
Showing posts with label ಸ್ಮರಿಸು ಸಂತತ ಹರಿಯನು jagannatha vittala. Show all posts

Saturday 14 December 2019

ಸ್ಮರಿಸು ಸಂತತ ಹರಿಯನು ankita jagannatha vittala

ಜಗನ್ನಾಥದಾಸರು
ರಾಗ ಮಧ್ಯಮಾವತಿ (ಭೂಪ್) ಝಂಪೆತಾಳ

ಸ್ಮರಿಸು ಸಂತತ ಹರಿಯನು ಮನವೆ ||ಪ||

ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ
ಸರಸಿಯೊಳಗಂದು ಕರಿಯ ನರನ ಸಂ-
ಗರದೊಳಗೆ ಕಾಯ್ದುದರಿಯ
ಜಪ ಮ ವ್ರತ ದಾನ ತಪಕೆ ದೊರೆಯ ಜಗದೀಶ
ಶರಣು ಪೊಕ್ಕವರ ತೊರೆಯ ಖರೆಯ ||ಅ.ಪ||

ತಾನೆ ಇಹಪರ ಸೌಖ್ಯ ದಾಸಿಗಳರಸನೆಂದು
ಸಾನುರಾಗದಿ ನಂಬಿದ ಜನಕೆ ಸುರ-
ಧೇನುವಂದದಲಿ ಮೋದಸಲಿಸುವ ಮ-
ಹಾನಂದ ಪೂರ್ಣಬೋಧ ಪ್ರತಿಸಾಮ-
ಗಾನಲೋಲ ಪ್ರಸಾದ-ಪಾದ ||೧||

ಎಲ್ಲೆಲ್ಲಿ ನೋಡೆ ಮತ್ತಲ್ಲಲ್ಲೆ ನೆಲೆಸಿಹನು
ಬಲ್ಲಿದನು ಭಾಗ್ಯವಂತ ನಂಬಿದರಿ-
ಗಲ್ಲದೆ ಒಲಿಯ ಭ್ರಾಂತ-ದುಷ್ಟ ಜನ-
ರೊಲ್ಲ ನಿಶ್ಚಯ ಮಹಂತರೊಡೆಯ ಕೈ-
ವಲ್ಯದಾಯಕನ ಇಂಥ-ಪಂಥ ||೨||

ನೋಡಿ ನೋಡಿಸುತಿಹನು ಮಾಡಿ ಮಾಡಿಸುತಿಹನು
ನೀಡಿ ನೀಡಿಸುವ ಪಿಡಿವ ಪಿಡಿಸುವನು
ಬೇಡಿ ಭೇಡಿಸುವ ಬಡವರೊಡೆಯ ಕೊಂ-
ಡಾಡುವರ ಒಡನಾಡುವ ಈ ಮಹಿಮೆ-
ಗೀಡೆಂದು ಆವ ನುಡಿವ-ಕೆಡುವ ||೩||

ಅಣುವಿನೊಳಗಣುವಹನು ಘನಕೆ ಘನತರನಹನು
ಅಣುಮಹದ್ವಿಲಕ್ಷಣ ಕಲ್ಯಾಣ ಗುಣಜ್ಞಾನ
ಘನ ಲಕ್ಷಣ-ಸಂಪೂರ್ಣ
ಮನಮುಟ್ಟಿ ಕರೆದಾಕ್ಷಣ ಬಂದೊದಗಿ
ಕುಣಿವ ಲಕ್ಷ್ಮೀವಕ್ಷನ-ಅನಪೇಕ್ಷಣ ||೪||

ಚೆಲುವರೊಳಗತಿಚೆಲುವ ಸುಲಭರೊಳಗತಿಸುಲಭ
ಒಲಿವ ಮನಬಂದ ತೆರದಿ , ಗುಣಕರ್ಮ
ಕುಲಶೀಲಗಳನೆಣಿಸನರಿದೀ ಭಕುತಿ
ಫಲವ ಕೊಡೆ ತಾ ತವಕದಿ ಶಬರಿ ಎಂ-
ಜಲನುಂಡ ಕರುಣಶರಧೀ-ಮರೆದೀ ||೫||

ಪ್ರಾದೇಶ ಮಾತ್ರ ಸ್ಥಿತ ಶ್ರೀದೇವಿಯರಸ ಕನ-
ಕೋದರಾದ್ಯಮರ ವ್ರಾತ ಸಹಿತ ಮಹ-
ದಾದಿ ಪೃಥ್ವ್ಯಂತ ಭೂತದೊಳು ನೆಲೆಸಿ
ಕಾದುಕೊಂಡಿಹ ವಿಧಾತ ಅಂಡತ್ರಿದ-
ಶಾಧಿಪನ ಸುತನ ಸೂತ-ಸ್ವರತ ||೬||

ಸ್ವಗತಭೇದ ವಿಶೂನ್ಯ ನಿಗಮ ಸಂಚಾರ ಶ್ರೀ
ಜಗನ್ನಾಥವಿಠಲರೇಯ ತನ್ನ ಪಾ-
ದಗಳ ಧ್ಯಾನಿಪರ ನೋಯಗೊಡದಂತೆ
ಹಗಲಿರುಳು ಕಾವ ಮಾಯಾರಮಣ ನಮ್ಮ -
ನಗಲಿ ಸೈರಿಸನು ಪ್ರಿಯ-ಧ್ಯೇಯ ||೭||
***


pallavi

smarisu santata hariyanu manavE

anupallavi

smarisu santata hariya karuNALugaLa dhoreya sarasiyoLagandu kariya narana sangaradoLage kAidu dariya japa hOma vrata dAna tapake doreya jagadIsha sharaNu pokkavarattoreya khareya

caraNam 1

tAnE ihapara saukhya dAsigaLa rasanendu
sAnurAgadi nambida janage suradhEnu vandadali mOdalisuva
mAhAnanda pUrNabOdha pratisAma gAnalOlana pradAsa pAda

caraNam 2

ellelli nODe mattallaLLe nalesihanu ballidanu bhAgyavanta
nambadarigalladE oliya bhrAnta duSTa janarolla nishcaya
mahantaroDeya kaivalya dAyakana intha pantha

caraNam 3

nODi nODisu tihanu mADi mADisu tihanu nIDi nIDisuva
piDiva piDisuvanu bEDi bEDisuva baDavaroDeya koNDADuvara
voLanADuva I mahimEgIDendu Ava nuDiva keDuva

caraNam 4

aNuvinoLagaNuvahanu ghanake ghanataranahanu aNu mahad-
vilakSaNa kalyANa guNa jnAna ghana lakSaNa sampUrNa
manamuTTi karedAkSaNa bandodagi kuNiva lakSmIvakSana anapEkSaNa

caraNam 5

celuvaroLagati celuva sulabharoLagati sulabha oliva mana banda teradi
guNa karma ula shIlagaLa nenisanaridI bhakuti phalava koDe tavakali
shabari enjalanuNDa karuNa sharadhI maredI

caraNam 6

prAdEsha mAtra sthita shrI dEva arasa kanakOda rAdyamara
vrAta sahita mahadAdi pratvyanta bhUtadOLi nelasi kAdu koNDiha
vidhAta aNDa tridashAdhipana sutana sUta svarata

caraNam 7

svagata bhEda vishUnya nigama sancAra shrI jagannAtha viThalarEya
tanna pAdagaLa dhyAnipara nOyagoDadantE hagaluruLu kAva
mAyA ramaNa namma nagali sairisanu priyadhyEya
***

ಸ್ಮರಿಸು ಸಂತತ ಹರಿಯನು ಮನವೇ ಪ

ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ
ಸರಸಿಯೊಳಗಂದು ಕರಿಯ ನರನ ಸಂಗರದೊಳಗೆ ಕಾಯ್ದು
ದೊರೆಯ ಜಗದೀಶ ಅ.ಪ.

ಪರ ಸೌಖ್ಯ ದಾನಿಗಳರಸನೆಂದು
ಸಾನುರಾಗದಿ ನಂಬಿದ ಜನಕೆ ಸುರ
ಮೋದ ಸಲಿಸುವ ಶ್ರೀಮ
ಪತಿ ಸಾಮ
ಗಾನ ಲೋಲನ ಪ್ರಸಾದಾ ಪಾದಾ 1

ಎಲ್ಲೆಲ್ಲಿ ನೋಡೆ ಮತ್ತಲ್ಲಲ್ಲಿ ನೆಲೆಸಿಹನು
ಬಲ್ಲಿದನು ಭಾಗ್ಯವಂತ ನಂಬಿದವರಿ
ಗಲ್ಲದೆ ಒಲಿಯ ಭ್ರಾಂತಾ ದುಷ್ಟ ಜನ
ರೊಲ್ಲ ನಿಶ್ಚಯ ಮಹಂತಾರೊಡೆಯ ಕೈ
ವಲ್ಯದಾಯಕನ ಇಂಥಾ ಪಂಥಾ 2

ಅಣುವಿನೊಳಗಣುವಹನು
ಘನಕೆ ಘನತರನಹನು
ಅಣು ಮಹದ್ವಿಲಕ್ಷಣಾ ಕಲ್ಯಾಣ
ಗುಣe್ಞÁನ ಘನಲಕ್ಷಣಾ ಸಂಪೂರ್ಣ
ಮನ ಮುಟ್ಟಿ ಕರೆದಾಕ್ಷಣಾ ಬಂದೊದಗಿ
ಕುಣಿವ ಲಕ್ಷ್ಮೀ ವಕ್ಷನಾ ಅನಪೇಕ್ಷನಾ 3

ಚೆಲುವರೊಳಗತಿ ಚೆಲುವ ಸುಲಭರೊಳಗತಿ ಸುಲಭ
ಒಲಿವ ಸರಿ ಬಂದ ತೆರದಿ ಗುಣಕರ್ಮ
ಕುಲಶೀಲಗಳನೆಣಿಸನರಿದೀ - ಭಕುತಿ
ಫಲವ ಕೊಡೆ ತಾ ತವಕದಿ ಶಬರಿ ಎಂ
ಶರಧಿ ಭರದೀ 4

ನೋಡಿ ನೋಡಿಸುತಿಹನು ಮಾಡಿ ಮಾಡಿಸುತಿಹನು
ನೀಡಿ ನೀಡಿಸುವ ಪಿಡಿವಾ ಪಿಡಿಸುವನು
ಬೇಡಿ ಬೇಡಿಸುವ ಬಡವರೊಡೆಯ ಕೊಂ
ಡಾಡುವರ ಒಡನಾಡುವಾ ಈ ಮಹಿಮೆ
ಗೀಡೆಂದು ಆವ ನುಡಿವಾ ಕೆಡುವಾ 5

ಕೋದರಾದ್ಯಮರ ವ್ರಾತಾ ಸಹಿತ ಮಹ
ದಾದಿ ಪೃಥ್ವಂತ ಭೂತಾದೊಳು ನಿಲಿಸಿ
ಕಾದುಕೊಂಡಿಹ ವಿಧಾತಾ ಅಂಡತ್ರಿದ
ಶಾಧಿಪನ ಸೂತ ಸಚ್ಚರಿತಾ 6

ನಿಗಮ ಸಂಚಾರ ಶ್ರೀ
ಜಗನ್ನಾಥವಿಠಲರೇಯಾ ತನ್ನ ಪಾ
ದಗಳ ಧ್ಯಾನಿಪರ ನೋಯಾಗೊಡದಂತೆ
ಮಾಯಾ ರಮಣ ನಮ್ಮ
ನಗಲಿ ಸೈರಿಸನು ಪ್ರಿಯಾ ಧ್ಯೇಯಾ 7
*********