ಕಂಡು ಧನ್ಯನಾದೆನಿಂದು ಕಾಮಿತಾರ್ಥವೀವನಾ l
ಭೂಮಂಡಲದೊಳಗದುಭೂತ ಮಹಿಮಾ ವೆಂಕಟೇಶನಾ ll ಪ ll
ಇಂದು ಬಿಂಬವನೆ ಗೆದ್ದ ನಖರೂಗಳಿಂದಾ ಮುನಿ l
ವೃಂದ ಹೃದಯಾಂಧಕಾರವನು ಹರಿಸುವನಾ l
ಸಂದಣಿಸೀದ ಧ್ವಜ ವಜ್ರಾ0ಕುಶ ರೇಖೆಗಳಿಂದ l
ಕೆಂದಾವರಿಯಂತೆ ಪೊಳೆವ ಚರಣಯುಗಳವನೂ ll 1 ll
ಶ್ರೀ ಭೂಮಿದೇವಿ ಅರಸೇರ ಸಿರಿ ಪ್ರಾಣಿ ಲಾಲನೇ l
ಸ್ವಾಭಾವಿಕ ಭಕ್ತಜನ ಪರಿಪಾಲನನುರಾಗದಿಂದಲಿ l
ಸ್ವಾಭಿಮಾನ್ಯ ಕಲ್ಪಭೂಜದಲ್ಲಿ ಉಪಮೆವಾದವು l
ಅಭಿವಂದಿತವಾದ ನಿನ್ನ ಚರಣಯುಗಳವನೂ ll 2 ll
ಶಂಭೂ ಸಹಿತವಾದ ಜಗವಪಾವನವ ಮಾಡುವಾ l
ಅಂಬರಾ ನದಿಯ ಪಡದ ವಿಧಿ ವಿಧೌತವಾದಾ l
ಅಂಬುಜಾಕ್ಷ ಗರುಡವಾಹನಲಕ್ಷ್ಮಿನಾರಾಯಣ l
ನೆಂಬ ಶ್ರೀನಿವಾಸ ನಿನ್ನ ಚರಣಯುಗಳವನೂ ll 3 ll
*******
ಗರುಡವಾಹನಲಕ್ಷ್ಮಿನಾರಾಯಣ ಆದ್ಯರ ಕೃತಿ
ಇವರ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ