..
ಹರಿಯು ಉಂಬೊ ಹರುಷವಮ್ಮನಮ್ಮ ದೊರೆಗಳೈವರು ಮಾಡೊ ಉಪಚಾರವಮ್ಮಪಲ್ಲ
ಮಂದಗಮನೆಯರ ಸಹಿತ ಕೃಷ್ಣ ಬಂದು ಮಿಂದು ಮಡಿಗಳನುಟ್ಟು ಶೀಘ್ರದಲಿ ಬಂದು ಕುಳಿತತಂದು ದ್ರೌಪತಿಯು ಬಡಿಸುತಿರಲು ಇಂದಿರೇಶ ಹರುಷದಲಿ ಉಣುತ 1
ಮೆಲ್ಲಗೆ ಉಣ್ಣಯ್ಯ ಯದುವೀರ ಹಿಂದೆ ಖಲ ಬುತ್ತಿಯ ಕದ್ದು ಉಂಡ ಅತಿಶೂರಗೊಲ್ಲರೆಲ್ಲರ ಕೂಡ ವಿಹಾರ ಗೊಲ್ಲರೆಲ್ಲರ ಕೂಡ ವಿಹಾರಿಎನಿಸಿ ಎಲ್ಲ ಪದಾರ್ಥ ಚಲ್ಲದಿರೊ ಧೀರ2
ಕದ್ದ ಬೆಣ್ಣಿಯ ನೆನೆಸಬೇಡ ನಮ್ಮ ಮುದ್ದು ರಾಮೇಶಗೆ ಬೇಕಾದ್ದು ಬೇಡೊ ಸಿದ್ಧ ದ್ರೌಪತಿ ನೀಡುತಿರಲು ಉದ್ದಿನ ಕಾಳಷ್ಟು ಭಿಡೆಯು ಬ್ಯಾಡ3
****