ಎಂಥಾ ಚಲುವನಮ್ಮ
ಗುರುವರನೆಂಥಾ ಚಲುವನಮ್ಮ ||ಪ||
ಶಾಂತಮೂರುತಿ ಸುಕುಮಾರ ಶರೀರನು
ಸಂತತ ವಾಂಛಿತವೀಯುವ ಯತಿವರ ||ಅ.ಪ||
ಸತ್ಯಲೋಕದೊಳು ಬ್ರಹ್ಮದೇವಗತಿ
ಪ್ರೀತಿಪಾತ್ರ ಕರ್ಮಜ ದೇವತೆಯು
ನಿತ್ಯವೂ ದಶರೂಪೀ ಕಮಲಾಜಾನಿಯ
ಭಕ್ತಿಯಿಂ ಭಜಿಸುವ ಶಂಕುಕರ್ಣನಿವ ||೧||
ಲೋಕದ ಸೌಂದರ್ಯಸಾರವ ಸೇರಿಸಿ
ಶ್ರೀಕಮಲಾಸನ ಪ್ರೇಮದಿ ಸೃಜಿಸಿದ
ಆ ಕಯಾಧುಸುತ ವರಪ್ರಹ್ಲಾದನ
ಸಾಕಾರನು ಜಗನ್ಮೋಹಕ ಶ್ರೀಗುರು ||೨||
ನಂದಕುಮಾರನ ಚರಣಾರಾಧಕ
ಸುಂದರ ಬಾಹ್ಲೀಕ ರಾಜನಿವನಮ್ಮ
ಮಂದಹಾಸಲಸದಿಂದುವದನ ಸಿರಿ
ಚಂದ್ರಿಕೆ ರಚಿಸಿದ ವ್ಯಾಸಯತೀಂದ್ರನು ||೩||
ತುಂಗಭದ್ರಾ ಸುತರಂಗಿಣಿ ತೀರದಿ
ಮಂಗಳಕರ ಮಂತ್ರಾಲಯ ನಿಲಯನು
ಸಿಂಗರಿಸಿಹ ಬೃಂದಾವನ ಮಧ್ಯದಿ
ಕಂಗೊಳಿಸುವ ರಾಘವೇಂದ್ರ ಮುನೀಂದ್ರನು ||೪||
ಒಂದಾರು ಶತವರ್ಷ ಬಂದ ಜನರ ಅಘ
ವೃಂದಕಳೆದಾರೋಗ್ಯ ಸಂಪದಗಳನು
ಕುಂದದೆ ಪುತ್ರಕಳತ್ರ ಮಂಗಳವಿತ್ತು
ಚಂದದಿ ಪಾಲಿಪ ಕಮಲೇಶನ ಪ್ರಿಯ ||೫||
***
ರಾಗ: ಮೋಹನ [ಅಥವಾ ಶ್ಯಾಮ] ತಾಳ: ಆದಿ (raga tala may differ in audio)
Entha chaluvanamma
guruvaranentha chaluvanamma ||pa||
Shantamuruti sukumara shariranu
santata vanchitaviyuva yativara ||a.pa||
Satyalokadolu brahmadevagati
pritipatra karmaja devateyu
nityavu dasarupi kamalajaniya
bhaktiyim bhajisuva sankukarnaniva ||1||
Lokada saundaryasarava serisi
srikamalasana premadi srujisida
a kayadhusuta varaprahladana
sakaranu jaganmohaka sriguru ||2||
Nandakumarana charanaradhaka
sundara bahlika rajanivanamma
mandahasalasadinduvadana
siri chandrike rachisida vyasayatindranu ||3||
Tungabhadra sutarangini tiradi
mangalakara mantralaya nilayanu
singarisiha brundavana madhyadi
kangolisuva raghavendra munindranu ||4||
Ondaru shatavarsha bandajanara
agha vrundakaledarogya sampadagalanu
kundade putrakalatra mangalavittu
chandadi palipa kamaleshana priya ||5||
***
ಎಂಥಾ ಚಲುವನಮ್ಮ ಗುರುವರನೆಂಥಾ ಚಲುವನಮ್ಮ ಪ
ಶಾಂತಮೂರುತಿ ಸುಕುಮಾರ ಶರೀರನು
ಸಂತತ ವಾಂಛಿತವೀಯುವ ಯತಿವರ ಅ
ಸತ್ಯಲೋಕದೊಳು ಬ್ರಹ್ಮದೇವಗತಿ-
ಪ್ರೀತಿಪಾತ್ರ ಕರ್ಮಜ ದೇವತೆಯು
ನಿತ್ಯವೂ ದಶರೂಪೀ ಕಮಲಾಜಾನಿಯ(?)
ಭಕ್ತಿಯಿಂ ಭಜಿಸುವ ಶಂಕುಕರ್ಣನಿವ 1
ಲೋಕದ ಸೌಂದರ್ಯಸಾರವಸೇರಿಸಿ
ಶ್ರೀಕಮಲಾಸನ ಪ್ರೇಮದಿ ಸೃಜಿಸಿದ
ಆ ಕಯಾಧುಸುತ ವರಪ್ರಹ್ಲಾದನ
ಸಾಕಾರನು ಜಗನ್ಮೋಹಕ ಶ್ರೀಗುರು 2
ನಂದಕುಮಾರನ ಚರಣಾರಾಧಕ
ಸುಂದರ ಬಾಹ್ಲೀಕರಾಜನಿವನಮ್ಮ
ಮಂದಹಾಸಲಸದಿಂದುವದನ ಸಿರಿ
ಚಂದ್ರಿಕೆ ರಚಿಸಿದ ವ್ಯಾಸಯತೀಂದ್ರನು 3
ತುಂಗಭದ್ರಾ ಸುತರಂಗಿಣಿ ತೀರದಿ
ಮಂಗಳಕರ ಮಂತ್ರಾಲಯ ನಿಲಯನು
ಸಿಂಗರಿಸಿಹ ಬೃಂದಾವನಮಧ್ಯದಿ
ಕಂಗೊಳಿಸುವ ರಾಘವೇಂದ್ರಮುನೀಂದ್ರನು 4
ಒಂದಾರು ಶತವರ್ಷ ಬಂದಜನರ ಅಘ
ವೃಂದಕಳೆದಾರೋಗ್ಯ ಸಂಪದಗಳನು
ಕುಂದದೆ ಪುತ್ರಕಳತ್ರ ಮಂಗಳವಿತ್ತು
ಚಂದದಿ ಪಾಲಿಪ ಕಮಲೇಶನ ಪ್ರಿಯ 5
****