Showing posts with label ಶ್ರೀಶ ವಿಠ್ಠಲ ನೀನೆ ಸಂತೈಪುದು jagannatha vittala. Show all posts
Showing posts with label ಶ್ರೀಶ ವಿಠ್ಠಲ ನೀನೆ ಸಂತೈಪುದು jagannatha vittala. Show all posts

Saturday, 14 December 2019

ಶ್ರೀಶ ವಿಠ್ಠಲ ನೀನೆ ಸಂತೈಪುದು ankita jagannatha vittala

ಜಗನ್ನಾಥದಾಸರು
ಶ್ರೀಶ ವಿಠ್ಠಲ ನೀನೆ ಸಂತೈಪುದು
ಕ್ಲೇಶನಾಶನ ನಿನ್ನದಾಸರವನೆಂದರಿತು ಪ

ಭೂದೇವ ಜನ್ಮವಿತ್ತವಗೆ ನೀ ದಯದಿಂದ
ಸಾಧು ಜನಸಂಗ ಸುe್ಞÁನ ಭಕುತಿ
ಸಾದರದಿ ನಿನ್ನ ತುತಿಸುವ ಭಾಗ್ಯ ಕರುಣಿಸಿದೆ ಕೃ
ಪೋದಧಿಯೆ ನಿನಗೆ ನಾ ನಮಿಪೆ ಬಹು ಬಗೆಯಿಂದ 1

ಯೋಗ್ಯತೆಗಳನು ಬಲ್ಲೆ ಬಹು ಜೀವರೊಳಗಿದ್ದು
ಅe್ಞÁನಿ ನೀನಲ್ಲ ಸರ್ವಜ್ಞನೆಂದು
ವಿe್ಞÁಪಿಸುವೆ ನಿರುತ ವಿನಯದಿಂದಲಿ ಪರಮ
ಭಾಗ್ಯವಂತನೆ ನಿನ್ನ ಪಾದಕಮಲಕೆ ಬಿಡದೆ 2

ಸಕಲ ಲೋಕಗಳ ನಾಯಕ ಇವಗೆ ಹೇಯ ಲೌ
ಕಿಕ ಮಾರ್ಗವನೆ ಬಿಡಿಸಿ ಸತ್ಯದಲ್ಲಿ
ಪ್ರಕಟವನೆ ಗೈಸು ಸದ್ಧರ್ಮ ಕರ್ಮಗಳ ದೇ
ವಕಿತನಯ ಶ್ರೀ ಜಗನ್ನಾಥವಿಠ್ಠಲ ಒಲಿದು 3
********