Showing posts with label ಬೇಗ ಸಾಗಿ ಬಾರಯ್ಯ ರಾಘವೇಂದ್ರ ಗುರುವೆ abhinava janardhana vittala. Show all posts
Showing posts with label ಬೇಗ ಸಾಗಿ ಬಾರಯ್ಯ ರಾಘವೇಂದ್ರ ಗುರುವೆ abhinava janardhana vittala. Show all posts

Friday, 27 December 2019

ಬೇಗ ಸಾಗಿ ಬಾರಯ್ಯ ರಾಘವೇಂದ್ರ ಗುರುವೆ ankita abhinava janardhana vittala

ಬೇಗ ಸಾಗಿ ಬಾರಯ್ಯ – ರಾಘವೇಂದ್ರ ಗುರುವೆ
ಬಾಗಿ ಭಕುತಿಲಿ ಚೆನ್ನಾಗಿ ತುತಿಪೆ ನಿನ್ನ            || ಪ ||
ಭಾಗವತಾಗ್ರಣಿ ಭಾಗವತರ ಪ್ರೀಯ
ಯೋಗಿ ಕುಲವರ್ಯ ಯೋಗೇಂದ್ರ ವಿನುತ    || ಅ ||

ಗಿರಿಯ ವೆಂಕಟ ನರಹರಿ ರಾಮಕೃಷ್ಣ ವ್ಯಾಸ
ಸಿರಿ ನಾರಾಯಣ ತನ್ನ ವರಮೂರ್ತಿಗಳಿಂದ
ಸರಸೀಜಭವ ವಾಯು ಸರಸ್ವತಿ ಭಾರತಿ ತ್ರಿ
ಪುರಹರ ಶೇಷ ವಿಪ ಸುರಪಾದ್ಯರ ಕೈಯಿಂದ
ಥರಥರದಲಿ ಪರಿಪರಿ ಸೇವೆಯ ವಿ
ಸ್ತಾರವಾಗಿ ಕೊಳ್ಳುತ ಮೆರಗುತ ನಿಲಿಸಿಹ
ಸ್ಥಿರವಾಗಿ ನಿಂದು ಆಶ್ಚರ್ಯವ
ಧರೆಗೆ ತೋರ್ಪುದಕೆ ಮೆರೆವುತಲಿಹ        || ೧ ||

ರಥಾರೂಢನಾಗಿ ಬರುತಲಿರೆ ನಿನ್ನ ಕ್ಷಿತಿಸುರರೆಲ್ಲ ಭಾಗ
ವತ ಪಂಚಮವೇದ ಭಾರತ ಮತ್ತೆ ಶ್ರುತಿಗಳಿ೦ದ ಬಲು ತುತಿಸುತಲಿನ್ನು
ಅತಿ ಹರುಷದಿ ಬಾರೆ ಯತಿಗಳಗತಿ ಸ೦
ಗತಿಯಿಂದಲಿ ನಲಿವುತ ಬಲು ಪರಿ ಮೆರೆ
ವುತ ಸದ್ಗತಿಯ ಕೊಡಲು ಅ
ಚ್ಯುತ ಸುಚರಿತ ಆ ನತಜನಬ೦ಧು        || ೨ ||

ಸೂರಿ ಜನರುಗಳಪಾರ ಸ೦ದೋಹದಿ ಬರೆ ಭಕುತರು ಗ೦
ಭೀರ ಸ್ವರದಿ ಪಾಡೆ ಬಾರಿ ಬಾರಿಗೆ ಮಂಗಳಾರತಿ ಎತ್ತಿ ಜನರು
ಹಾರ ಪರಿಮಳ ಶರೀರಕೆ ಗಂಧ ಪೂಸಿ
ಭೂರಿ ಜನರು ಕೈವಾರಿಸುತಿರಲು
ಭೇರಿ ಕಹಳೆ ಭೂಂ ಭೋರಿಡುತಿರೆ ಮುರವೈರಿ
ಅಭಿನವಜನಾರ್ಧನ ವಿಠ್ಠಲ ಸೇರಿ ಸುಖಿಪ ಗುರುಸಾರ್ವಭೌಮ || ೩ ||
********