ಭಾರತಿದೇವಿ ಭಕ್ತರ ತಾಯಿ ಭಾರತಿ ದೇವಿ ನಿಮ್ಮ ಆರಾಧಿಸುವೆವಮ್ಮನಾರಿಯರ ಸೋಲಿಸಮ್ಮಮಾರಿ ಮೇಲಾಗಿಸಮ್ಮ ಪ.
ಮದನನತ್ತಿಗೆ ರಂಭೆ ಮೊದಲಿಗೆ ಬಲಗೊಂಬೆ ಮುದದಿಂದ ಗೆಲಿಸೆಂಬೆ ಸುದತೆ ಪುತ್ಥಳಿಗೊಂಬೆ1
ನೀನೆ ಮುಂದಣ ವಾಣಿ ಪ್ರಾಣದೇವರ ರಾಣಿಪ್ರವೀಣೆ ಸುಪ್ಪಾಣಿ ಕಲ್ಯಾಣಿ ನಿನ್ನನುಗಾಣೆ 2
ಪ್ರದ್ಯುಮ್ನನ ಮಗಳೆ ರುದ್ರಾದಿವಂದ್ಯಳೆಮುದ್ದು ರಾಮೇಶನ ಪ್ರವಾಳೆ ಶುದ್ಧಪಾತ್ರಳೆ ಕೇಳೆ 3
***