ಪರಮ ಪುರುಷ ಹರಿ ಗೋವಿಂದ
ಕರಿವರದ ನಾರಾಯಣ ಗೋವಿಂದ |ಪ|
ನಿಶಿಪೆಸರಸುರನ ಉಸುರ ತೊಲಗಿಸಿದ
ಕುಸುಮಶರನ ಪಿತ ಗೋವಿಂದ|
ರಸಪೂರಿತ ಶ್ರುತಿ ಮಸುಳಿಸದಲೆ ತಂದು
ಬಿಸಜಸಂಭವಗಿತ್ತೆ ಗೋವಿಂದ |೧|
ಜತನ ತಪ್ಪದೆ ಅಮೃತ ಮಥನದಿ ಪ-
ರ್ವತವನುದ್ಧರಿಸಿದೆ ಗೋವಿಂದ|
ಶತಕ್ರತುವಿನ ಸಿರಿ ಹತವಾಗೆ ಕಡಲನು
ಮಥಿಸಿ ನಿಲ್ಲಿಸಿಗೊಟ್ಟೆ ಗೋವಿಂದ |೨|
ಭೂತಳವೆರಸಿ ರಸಾತಳಕಿಳಿದನ ಪಾ-
ತಾಳದಿ ಕಂಡೆ ಗೋವಿಂದ|
ಆತನೊಡನೆ ಕಾದಿ ಖ್ಯಾತಿಲಿ ಮಡುಹಿ ಮ-
ಹೀತಳವನು ತಂದೆ ಗೋವಿಂದ |೩|
ದುರುಳ ದೈತ್ಯನ ಸೀಳಿ ಕರುಳ ಮಾಲೆಯ ಮುಂ-
ಗುರುಳೊಳು ಧರಿಸಿದೆ ಗೋವಿಂದ|
ಗರಳ ಕಂಧರ ವಿಧಿ ಕರವೆತ್ತಿ ಪೊಗಳಲು
ತರಳಗಭಯವಿತ್ತೆ ಗೋವಿಂದ |೪|
ವಾಮನನಾಗಿ ನಿಸ್ಸೀಮ ಬಲಿಯ ಕೈಯ
ಭೂಮಿಯಳೆದುಕೊಂಡೆ ಗೋವಿಂದ|
ತಾಮರಸೋದ್ಭವಾಂಡ ಒಡೆದು ನಿಂದು
ವ್ಯೋಮ ಗಂಗೆಯ ಪೆತ್ತೆ ಗೋವಿಂದ |೫|
ವರಪರಶುಧರನಾಗಿ ಭೂಪರ ಧಿ-
ಕ್ಕರಿಸಿ ಸಂಹರಿಸಿದೆ ಗೋವಿಂದ|
ತರಹರಿಸದೆ ವಸುಂಧರೆಯನೆಲ್ಲವ ಭೂ-
ಸುರರಿಗೊಪ್ಪಿಸಿಕೊಟ್ಟೆ ಗೋವಿಂದ |೬|
ತ್ರಿನಯನನೊಲಿಸಿದ ರಾವಣನನು
ರಣಾಂಗಣದೊಳಗೊರಸಿದೆ ಗೋವಿಂದ|
ಕ್ಷಣವೆನಿಸದೆ ಮಣಿಪುರದಲಿ ವಿಭೀ-
ಷಣಗೆ ಶಾಶ್ವತವಿತ್ತೆ ಗೋವಿಂದ |೭|
ವಾರಣದಂತವಿದಾರಣ ಕಂಸ ಸಂ-
ಹರಣ ಭುಜಬಲ ಗೋವಿಂದ|
ವಾರಣ ಪುರಪತಿ ದಾರಣಪ್ರಿಯ ಭೂ
ಭಾರೋತ್ತಾರಣ ಗೋವಿಂದ |೮|
ಕಥೆಯ ನಿರ್ಮಿಸಿ ಪತಿವ್ರತೆಯರ ಬಲು
ವ್ರತಗಳ ಕೆಡಿಸಿದೆ ಗೋವಿಂದ|
ಜತನದಿಂದ ತ್ರಿಪುರವನುರುಹಿ ದೇ-
ವತೆಗಳ ಸಲಹಿದೆ ಗೋವಿಂದ |೯|
ವಾಜಿಯ ಮರುಕದಿ ತೇಜದಲೇರಿ ಕ-
ನೋಜು ರಾವುತನಾದೆ ಗೋವಿಂದ|
ವಾಜಿಯ ಬೆನ್ನೊಳು ರಾಜಿಪ ಗುಣದಂತೆ
ಈ ಜಗದೊಳಗಿಪ್ಪೆ ಗೋವಿಂದ |೧೦|
ಮೇದಿನಿಗೋಸುಗ ಕಾದಿ ಕಲಹದಿ ವಿ-
ರೋಧಿಗಳನು ಕೊಂದೆ ಗೋವಿಂದ|
ಸಾಧುಗಳಿಗೆ ಸುಖವೈದಿಪ ಕಾಗಿನೆಲೆ
ಆದಿ ಕೇಶವರಾಯ ಗೋವಿಂದ |೧೧|
***
parama puruSha hari gOviMda
karivarada nArAyaNa gOviMda |pa|
niSipesarasurana usura tolagisida
kusumaSarana pita gOviMda|
rasapUrita Sruti masuLisadale taMdu
bisajasaMBavagitte gOviMda |1|
jatana tappade amRuta mathanadi pa-
rvatavanuddhariside gOviMda|
Satakratuvina siri hatavAge kaDalanu
mathisi nillisigoTTe gOviMda |2|
BUtaLaverasi rasAtaLakiLidana pA-
tALadi kaMDe gOviMda|
AtanoDane kAdi KyAtili maDuhi ma-
hItaLavanu taMde gOviMda |3|
duruLa daityana sILi karuLa mAleya muM-
guruLoLu dhariside gOviMda|
garaLa kaMdhara vidhi karavetti pogaLalu
taraLagaBayavitte gOviMda |4|
vAmananAgi nissIma baliya kaiya
BUmiyaLedukoMDe gOviMda|
tAmarasOdBavAMDa oDedu niMdu
vyOma gaMgeya pette gOviMda |5|
varaparaSudharanAgi BUpara dhi-
kkarisi saMhariside gOviMda|
taraharisade vasuMdhareyanellava BU-
surarigoppisikoTTe gOviMda |6|
trinayananolisida rAvaNananu
raNAMgaNadoLagoraside gOviMda|
kShaNavenisade maNipuradali viBI-
ShaNage SASvatavitte gOviMda |7|
vAraNadaMtavidAraNa kaMsa saM-
haraNa Bujabala gOviMda|
vAraNa purapati dAraNapriya BU
BArOttAraNa gOviMda |8|
katheya nirmisi pativrateyara balu
vratagaLa keDiside gOviMda|
jatanadiMda tripuravanuruhi dE-
vategaLa salahide gOviMda |9|
vAjiya marukadi tEjadalEri ka-
nOju rAvutanAde gOviMda|
vAjiya bennoLu rAjipa guNadaMte
I jagadoLagippe gOviMda |10|
mEdinigOsuga kAdi kalahadi vi-
rOdhigaLanu koMde gOviMda|
sAdhugaLige suKavaidipa kAginele
Adi kESavarAya gOviMda |11|
***
ಪರಮ ಪುರುಷ ಹರಿ ಗೋವಿಂದ - ಸಿರಿವರ ನಾರಾಯಣ ಗೋವಿಂದ ಪ
ನಿಶೆವೆಸರಸುರನ ಉಸಿರ ತೊಲಗಿಸಿದೆಕುಸುಮ ಶರನ ಪಿತ ಗೋವಿಂದವಸು ಪೂರಿತ ಶ್ರುತಿ ಮಸುಳಿಸದೆ ತಂದೆಬಿಸಜ ಸಂಭವನಯ್ಯ ಗೋವಿಂದ 1
ಜತನದಿ ಮಧುಮಥನದಿ ಮಂದರ ಪರುವತ ಉದ್ಧರಿಸಿದೆ ಗೋವಿಂದಶತ ಕ್ರತುವಿನ ಸಿರಿ ಗತವಾಗದ ಮುನ್ನಕ್ಷಿತಿ ಪೆತ್ತನಯ್ಯ ಗೋವಿಂದ 2
ಭೂತಳವೆರಸಿ ರಸಾತಳಕಿಳಿದಿಹಪಾತಕನ ಕಂಡೆ ಗೋವಿಂದಆತನೊಡನೆ ಕಾದಾತನ ಗೆಲಿದು ಮ-ಹೀತಳವನು ತಂದೆ ಗೋವಿಂದ 3
ದುರುಳಾಸುರನ ನಡುಗರುಳ ಮಾಲೆ ಮುಂ-ಗೊರಳೊಳು ಧರಿಸಿದೆ ಗೋವಿಂದಗರಳ ಕೊರಳನು ಬೆರಳೆತ್ತಿ ಪೊಗಳಲುತರಳಗೊಲಿದೆ ನೀ ಗೋವಿಂದ4
ವಾಮನನಾಗಿ ನಿಸ್ಸೀಮ ಬಲಿಯ ಕೈಯಭೂಮಿಯನಳೆಕೊಂಡೆ ಗೋವಿಂದತಾಮರಸ ಪದದಿ ಕನಕ ಗರ್ಭಯೋಗವ್ಯೋಮ ಗಂಗೆಯ ತಂದೆ ಗೋವಿಂದ 5
ಸುರ ಪಶುವಿಗೆ ಋಷಿಯನು ಕೊಂದನ ಬಹುಕರ ಬಲ ಮುರಿದೆಯೊ ಗೋವಿಂದತರ ಹರಿಸದೆ ವಸುಧೆಯ ಒಡೆತನ ಭೂಸುರರಿಗೆ ನೀಡಿದೆ ಗೋವಿಂದ 6
ತ್ರಿಣಯನ ತಾತ್ಪರ್ಯ ರಾವಣನ ಶಿರರಣದೊಳುರುಳಿಸಿದೆ ಗೋವಿಂದಕ್ಷಣಮೆಣಿಸದೆ ಸದ್ಗುಣವಂತ ವಿಭೀ-ಷಣಗಭಯವಿತ್ತೆ ಗೋವಿಂದ 7
ಮಾರಣ ಕ್ರತು ಸಂಪೂರಣ ಕಂಸ ಸಂ-ಹಾರಣ ಭುಜಬಲ ಗೋವಿಂದವಾರಣಪುರಪತಿ ಸಿರಿ ಭೂಭಾರೋತ್ತಾರಣ ಬಲಯುತ ಗೋವಿಂದ 8
ಕಥೆಯನು ನಿರ್ಮಿಸಿ ಪತಿವ್ರತೆಯರ ಘನವ್ರತಗಳ ಕೆಡಿಸಿದೆ ಗೋವಿಂದಜತೆಯಗಲದ ಪುರ ತ್ರಿತಯ ಗೆಲಿದು ದೇ-ವತೆಗಳ ಸಲಹಿದೆ ಗೋವಿಂದ 9
ಜಾಜಿಯ ಮರಕತ ತೇಜಿಯನೇರಿ ವಿ-ರಾಜಿಪ ರಾವುತ ಗೋವಿಂದಸೂಜಿಯ ಬೆನ್ನೊಳು ರಾಜಿಪ ತೆರದಿ ಸ-ಹಜರೊಳಡಗಿರ್ಪ ಗೋವಿಂದ 10
ಮೇದಿನಿಗೋಸುಗ ಕಾದಿ ಕಲಹದಿ ವಿ-ರೋಧಿಗಳ ಕೊಂದೆ ಗೋವಿಂದಸಾಧುಗಳಿಗೆ ಸುಖವೀಯುವ ಬಾಡದಶ್ರೀಧರ ಕೇಶವ ಗೋವಿಂದ 11
***