Showing posts with label ಕಾವನಯ್ಯಾ ಜಗವನನುದಿನ ದೇವ ತಿರುಪತಿಯ vijaya vittala. Show all posts
Showing posts with label ಕಾವನಯ್ಯಾ ಜಗವನನುದಿನ ದೇವ ತಿರುಪತಿಯ vijaya vittala. Show all posts

Wednesday, 16 October 2019

ಕಾವನಯ್ಯಾ ಜಗವನನುದಿನ ದೇವ ತಿರುಪತಿಯ ankita vijaya vittala

ಕಾವನಯ್ಯಾ ಜಗವನನುದಿನ |
ದೇವ ತಿರುಪತಿಯ ದಾಸಾ ಶ್ರೀ ವಲ್ಲಭವೆಂಕಟೇಶಾ ಪ

ತರಳ ಉತ್ತಾನಪಾದಿಯ ನೋಡು |
ಮಂದ ಕಾಯನ್ನ |
ಕುರೂಪಿಯಾದ ಕುಬಜೆ ವ್ಯಭಿ |
ಚರಿಯ ಅಜಮಿಳನ ಕಾಯದ 1

ಬಡವನಾಗಿದ್ದ ಸುಧಾಮ ಕೊಲೆ
ಗಡಿಕನಾದ ಕಿರಾತನ್ನ ನೋಡು |
ನಡತೆ ತಪ್ಪಿದ ಸುಗ್ರೀವ ಕುಲವ |
ಕಡಿದ ಪಾರ್ಥನ್ನ ಕಾಯದಾ 2

ಇಟ್ಟಿಗೆ ವಗೆದ ಪುಂಡಲೀಕನ |
ಬೆಟ್ಟಲೆ ಬೆಟ್ಟವ ನೆತ್ತಿಸಿದವನಾ |
ಪೆಟ್ಟನು ಫಣಿಗೆಯಿಟ್ಟ ಭೀಷ್ಮನ |
ಕಟ್ಟಿಬಿಗಿದ ಗೋಪಿಯ ಕಾಯದಾ3

ಜನನ ನೋಡು ವಿದುರನ್ನ ಕ
ರುಣಿ ಎಂಬೆನೆ ರುಕುಮಾಂಗದ |
ಮನೆ ಉಳ್ಳವರೆ ಸನಕಾದಿಗಳು |
ಮಣಿಹಾಕಿಸಿದ ಭೂಪತಿಯ ಕಾಯದಾ4

ಶಕುತಿ ಮಿಕ್ಕಾದ ಕರ್ಮಗಳು ನೋಡಾ |
ಭಕುತಿಗೆ ಮಾತ್ರ ಸಿಲುಕುವವನು |
ಭಕುತವತ್ಸಲ ಶ್ರೀನಿವಾಸಾ |
ಅಕಳಂಕ ರೂಪ ವಿಜಯವಿಠ್ಠಲ 5
*********