Wednesday, 16 October 2019

ಕಾವನಯ್ಯಾ ಜಗವನನುದಿನ ದೇವ ತಿರುಪತಿಯ ankita vijaya vittala

ರಾಗ -  :  ತಾಳ -

ಕಾವನಯ್ಯಾ ಜಗವನನುದಿನ l
ದೇವ ತಿರುಪತಿಯ ವಾಸಾ ಶ್ರೀವಲ್ಲಭವೆಂಕಟೇಶಾ ll ಪ ll

ತರಳ ಉತ್ತಾನಪಾದಿಯ ನೋಡು l
ಕರಿಯ ನೋಡು ಮಂದ ಕಾಯನ್ನ l
ಕುರೂಪಿಯಾದ ಕುಬುಜೆ ವ್ಯಭಿಚರಿಯ ಅಜಮಿಳನ ಕಾಯದ ll 1 ll

ಬಡವನಾಗಿದ್ದ ಸುಧಾಮ ಕೊಲೆ
ಗಡಿಕನಾದ ಕಿರಾತನ್ನ ನೋಡು l
ನಡತೆ ತಪ್ಪಿದ ಸುಗ್ರೀವ ಕುಲವ l
ಕಡಿದ ಪಾರ್ಥನ್ನ ಕಾಯದಾ ll 2 ll

ಇಟ್ಟಿಗೆ ವಗೆದ ಪುಂಡಲೀಕನ l
ಬೆಟ್ಟಲೆ ಬೆಟ್ಟವ ನೆತ್ತಿಸಿದವನಾ l
ಪೆಟ್ಟನು ಫಣಿಗೆಯಿಟ್ಟ ಭೀಷ್ಮನ l
ಕಟ್ಟಿಬಿಗಿದ ಗೋಪಿಯ ಕಾಯದಾ ll 3 ll

ಜನನ ನೋಡು ವಿದುರನ್ನ ಕ l
ರುಣಿ ಎಂಬೆನೆ ರುಕುಮಾಂಗದ l
ಮನೆ ಉಳ್ಳವರೆ ಸನಕಾದಿಗಳು l
ಮಣಿಹಾಕಿಸಿದ ಭೂಪತಿಯ ಕಾಯದಾ ll 4 ll

ಶಕುತಿ ಮಿಕ್ಕಾದ ಕರ್ಮಗಳು ನೋಡಾ l
ಭಕುತಿಗೆ ಮಾತ್ರ ಸಿಲುಕುವವನು l
ಭಕುತವತ್ಸಲ ಶ್ರೀನಿವಾಸಾ l
ಅಕಳಂಕ ರೂಪ ವಿಜಯವಿಟ್ಠಲ ll 5 ll
***

ಕಾವನಯ್ಯಾ ಜಗವನನುದಿನ |
ದೇವ ತಿರುಪತಿಯ ದಾಸಾ ಶ್ರೀ ವಲ್ಲಭವೆಂಕಟೇಶಾ ಪ

ತರಳ ಉತ್ತಾನಪಾದಿಯ ನೋಡು |
ಮಂದ ಕಾಯನ್ನ |
ಕುರೂಪಿಯಾದ ಕುಬಜೆ ವ್ಯಭಿ |
ಚರಿಯ ಅಜಮಿಳನ ಕಾಯದ 1

ಬಡವನಾಗಿದ್ದ ಸುಧಾಮ ಕೊಲೆ
ಗಡಿಕನಾದ ಕಿರಾತನ್ನ ನೋಡು |
ನಡತೆ ತಪ್ಪಿದ ಸುಗ್ರೀವ ಕುಲವ |
ಕಡಿದ ಪಾರ್ಥನ್ನ ಕಾಯದಾ 2

ಇಟ್ಟಿಗೆ ವಗೆದ ಪುಂಡಲೀಕನ |
ಬೆಟ್ಟಲೆ ಬೆಟ್ಟವ ನೆತ್ತಿಸಿದವನಾ |
ಪೆಟ್ಟನು ಫಣಿಗೆಯಿಟ್ಟ ಭೀಷ್ಮನ |
ಕಟ್ಟಿಬಿಗಿದ ಗೋಪಿಯ ಕಾಯದಾ3

ಜನನ ನೋಡು ವಿದುರನ್ನ ಕ
ರುಣಿ ಎಂಬೆನೆ ರುಕುಮಾಂಗದ |
ಮನೆ ಉಳ್ಳವರೆ ಸನಕಾದಿಗಳು |
ಮಣಿಹಾಕಿಸಿದ ಭೂಪತಿಯ ಕಾಯದಾ4

ಶಕುತಿ ಮಿಕ್ಕಾದ ಕರ್ಮಗಳು ನೋಡಾ |
ಭಕುತಿಗೆ ಮಾತ್ರ ಸಿಲುಕುವವನು |
ಭಕುತವತ್ಸಲ ಶ್ರೀನಿವಾಸಾ |
ಅಕಳಂಕ ರೂಪ ವಿಜಯವಿಠ್ಠಲ 5
***

No comments:

Post a Comment