Showing posts with label ದುರ್ಗಣ ಪರಿಹರಿಸಿ ದುರ್ಗದೊಳಿಡು ಎನ್ನಾ vijaya vittala. Show all posts
Showing posts with label ದುರ್ಗಣ ಪರಿಹರಿಸಿ ದುರ್ಗದೊಳಿಡು ಎನ್ನಾ vijaya vittala. Show all posts

Thursday, 17 October 2019

ದುರ್ಗಣ ಪರಿಹರಿಸಿ ದುರ್ಗದೊಳಿಡು ಎನ್ನಾ ankita vijaya vittala

ದುರ್ಗಣ ಪರಿಹರಿಸಿ
ದುರ್ಗದೊಳಿಡು ಎನ್ನಾ ಪ

ಪಾಪಕ್ಕೆ ಎರಗುತಾ
ತಾಪಸರನ್ನ ಜರಿದು ಬಲು ಸಂ
ತಾಪದಿ ಬಳಲಿದೆನೊ ಕುಕ್ಕಿ 1

ಹಿಂಸೆಯ ಮಾಡುವಲ್ಲಿ ಹೇಸದೆ
ಧ್ವಂಸಗೈಸು ವೇಗಾ 2

ಕಠಿಣ ಉತ್ತರ ನುಡಿದು ಮತ್ಸರ
ಕುಟಿಲತನವಾ ಮರಿಯೆ
ಸಟೆ ಮಾತುಗಳನಾಡಿ ನಿನ್ನಾ ನಿ
ಚ್ಚಟದ ಮರಿದೆನೊ ಹರಿಯೆ 3

ಕಲಹವೆಂದರೆ ಕಾಲು ಕೆದರುವೆ
ಕೆಲಸಾರದಲೇವೇ ಮಲಿತು ಎದುರು
ನೆಲೆಗಾಣದೇ ಪೋದೆ4

ವ್ಯಾಧೆ ವೇದನೆಯಿಂದ ಬಲು ಕಷ್ಟ
ವಾದದು ಈ ದೇಹಕ್ಕೆ
ಮೋದ ವಿಜಯವಿಠ್ಠಲ ನಿನ್ನಿಂ
ದಾದದ್ದು ತೊಲಗಿಸಿ 5
**********