Showing posts with label ಳಳ- RSS- ಗರಿಗೆದರಿದೆ ಹಿಂದುತ್ವವು ಇಂದು others rss. Show all posts
Showing posts with label ಳಳ- RSS- ಗರಿಗೆದರಿದೆ ಹಿಂದುತ್ವವು ಇಂದು others rss. Show all posts

Friday, 24 December 2021

ಗರಿಗೆದರಿದೆ ಹಿಂದುತ್ವವು ಇಂದು others rss

   

RSS song .  ram mandir opened on January 22, 2024 (now this song is reduntant)

ಗರಿಗೆದರಿದೆ ಹಿಂದುತ್ವವು ಇಂದು

ಭೋರ್ಗರೆದಿದೆ ಯುವಶಕ್ತಿಯ ಸಿಂಧು

ಯುಗದ ಸವಾಲಿಗೆ ಉತ್ತರ ನೀಡಿ

ಜಗದ ವಿಕಾಸಕೆ ನಾಂದಿಯ ಹಾಡಿ

ತಮಸೋಮಾ ಜ್ಯೋತಿರ್ಗಮಯ,

ಮೃತ್ಯೋರ್ಮಾ ಅಮೃತಂಗಮಯಾ ||ಪ||


ಶೃತಿ-ವೇದಂಗಳ ಅಂಗಳದಲ್ಲಿ

ಗಂಗೆಯ ಮಂಜುಳ ಲಹರಿಗಳಲ್ಲಿ

ತುಂಗ ಹಿಮಾಚಲ ಶೃಂಗಗಳಲ್ಲಿ,

ಮೂಡಿಹುದು ನವವಿಶ್ವಾಸ

ಜಾಗೃತಿಯಾ ಜಯ ಜಯ ಘೋಷ ||೧||


ಶತಶತಮಾನದ ಜಡತೆಯನುರಿಸಿ,

ಗತ ಚರಿತೆಯ ಅಪಮಾನವನೊರೆಸಿ

ದೃಢಸಂಕಲ್ಪದ ಹೆಜ್ಜೆಯನಿರಿಸಿ,

ಭೇಧವನಳಿಸಿದ ಬಂಧುತ್ವ

ಮೇಲೆದ್ದಿಹುದು ಹಿಂದುತ್ವ ||೨||


ಭಾರತ ತೋರಿದ ಧರ್ಮದ ಹಾದಿ,

ಮನುಜನ ಏಳ್ಗೆಗೆ ಭದ್ರ ಬುನಾದಿ

ಸಂಸ್ಕೃತಿಯೆಮದು ಅನಂತ ಅನಾದಿ,

ಭಾರತಮಾತೆಗೆ ಅರ್ಪಿತವು

ಜಗಜನನಿಯ ಕೀರ್ತಿ ಸುಮವು ||೩||


ರಾಮನ ಮಂದಿರ ನವನಿರ್ಮಾಣ,

ಮುಡಿಪಿದು ಕೋಟಿ ತರುಣರ ಪ್ರಾಣ

ನಿಲ್ಲದಿದು ಗೆಲುವಿನ ಅಭಿಯಾನ,

ಅಂತಿಮ ಗುರಿ ಸೇರುವವರೆಗೂ

ವಿಜಯಧ್ವಜ ಹಾರುವವರೆಗೂ ||೪||

***

garigedaride hiMdutvavu iMdu

BOrgaredide yuvaSaktiya siMdhu

yugada savAlige uttara nIDi

jagada vikAsake nAMdiya hADi

tamasOmA jyOtirgamaya,

mRutyOrmA amRutaMgamayA ||pa||


SRuti-vEdaMgaLa aMgaLadalli

gaMgeya maMjuLa laharigaLalli

tuMga himAcala SRuMgagaLalli,

mUDihudu navaviSvAsa

jAgRutiyA jaya jaya GOSha ||1||


SataSatamAnada jaDateyanurisi,

gata cariteya apamAnavanoresi

dRuDhasaMkalpada hejjeyanirisi,

BEdhavanaLisida baMdhutva

mEleddihudu hiMdutva ||2||


BArata tOrida dharmada hAdi,

manujana ELgege Badra bunAdi

saMskRutiyemadu anaMta anAdi,

BAratamAtege arpitavu

jagajananiya kIrti sumavu ||3||


rAmana maMdira navanirmANa,

muDipidu kOTi taruNara prANa

nilladidu geluvina aBiyAna,

aMtima guri sEruvavaregU

vijayadhvaja hAruvavaregU ||4||

***