Showing posts with label ಸಾರಿದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬುದ್ಧಿ ಮನವೆ neleyadikeshava. Show all posts
Showing posts with label ಸಾರಿದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬುದ್ಧಿ ಮನವೆ neleyadikeshava. Show all posts

Friday, 27 December 2019

ಸಾರಿದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬುದ್ಧಿ ಮನವೆ ankita neleyadikeshava

ರಾಗ ರೇಗುಪ್ತಿ ಆದಿತಾಳ

ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬುದ್ಧಿ ಮನವೆ
ದೂರೋ ಬುದ್ಧಿ ಮಾಡಬೇಡ ಕೈಯಲಿ ಕೋ ಕಡ್ಡಿ , ನಿನ್ನ ಕೈಯಲಿ ||ಪ||

ಕೋಪವನ್ನೆ ಮಾಡದಿರು , ಪಾಪಕೆ ಗುರಿಯಾಗದಿರು
ಶ್ರೀಪತಿಯ ಧ್ಯಾನವನ್ನು ನೀ ಪಠಿಸುತಿರು ಮನವೆ ||೧||

ಅಷ್ಟಮದದಿ ಬೆರೆಯದಿರು , ನಷ್ಟಕೆ ಗುರಿಯಾಗದಿರು
ದುಷ್ಟಸಂಗವನ್ನು ಮಾಡಿ ಭ್ರಷ್ಟನಾಗಬೇಡ ಮನವೆ ||೨||

ಸಿರಿಯ ಮೆಚ್ಚಿ ಮೆರೆಯದಿರು , ಬರಿದೆ ಹೊತ್ತು ಕಳೆಯದಿರು
ಪರರ ನಿಂದೆಯನ್ನು ಮಾಡಿ ನರಕಿಯಾಗಬೇಡ ಮನವೆ ||೩||

ಕಾಯವನ್ನು ನಂಬದಿರು , ಮಾಯಕೆ ಮರುಳಾಗದಿರು
ಸ್ತ್ರೀಯರನ್ನು ಕಂಡು ನೀನು ಬಯಸದಿರು ಮರುಳು ಮನವೆ ||೪||

ನಿನ್ನ ನಿಜವ ನಂಬದಿರು , ಉನ್ನತಾಸೆ ಮಾಡದಿರು
ಚನ್ನಕೇಶವನ್ನ ಪಾದವನ್ನು ನೀನು ನಂಬು ಮನವೆ ||೫||
***

 ..

ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬಡ್ಡಿ ಮನವೆ ಪ


ದೂರೋ ಬುದ್ಧಿ ಮಾಡಬೇಡ ಕೈಯೊಳಿಕೋ ಕಡ್ಡಿನಿನ್ನ ಕೈಯೊಳಿಕೋ ಕಡ್ಡಿ ಅ

ಕೋಪವನ್ನೆ ಮಾಡದಿರು ಪಾಪಕೆ ಗುರಿಯಾಗದಿರುಶ್ರೀಪತಿಯ ನಾಮವನು ನೀ ಪಠಿಸುತಲಿರು ಮನವೆ 1


ಅಷ್ಟಮದದಿ ಮೆರೆಯದಿರು ನಷ್ಟಕೆ ಗುರಿಯಾಗದಿರುದುಷ್ಟಸಂಗವನ್ನು ಮಾಡಿ ಭ್ರಷ್ಟನಾಗಬೇಡ ಮನವೆ 2


ಸಿರಿಯ ಮೆಚ್ಚಿ ಮೆರೆಯದಿರು ಬರಿದೆ ಹೊತ್ತ ಕಳೆಯದಿರುಪರರ ನಿಂದೆಯನ್ನು ಮಾಡಿ ನರಕಿಯಾಗಬೇಡ ಮನವೆ 3


ಕಾಯವನ್ನು ನಂಬದಿರು ಮಾಯಕೆ ಮರುಳಾಗದಿರುಸ್ತ್ರೀಯರನ್ನು ಕಂಡು ನೀನು ಬಯಸದಿರು ಮರುಳು ಮನವೆ 4


ನಿನ್ನ ನಿಜವ ನಂಬದಿರು ಉನ್ನತಾಸೆ ಮಾಡದಿರುಚೆನ್ನಾದಿಕೇಶವನ ಪಾದವನ್ನು ನೀನು ನಂಬು ಮನವೆ 5

***