ಆಚಾರ್ಯ ನಾಗರಾಜು ಹಾವೇರಿ ಗುರು ವಿಜಯ ಪ್ರತಿಷ್ಠಾನ
" ವೇಂಕಟನಾಥ " ಮುದ್ರಿಕೆಯಲ್ಲಿ....
ಆದವಾನಿ ಪುರ ವಾಸಾ ।
ಮುದದಿ ಪಾಲಿಸೊ -
ಜೀಯಾ ।। ಪಲ್ಲವಿ ।।
ನಾಕೇಶನವತಾರನೆ
ನಾಕುಬೀದಿಯ ಜ್ಞಾನ ಕೊಟ್ಟು ।
ನಾಕ ಋಷಿ ವೊಲುಮೆ ಪಡೆದ -
ವಿಜಯದಾಸರ -
ಕಾರುಣ್ಯಪಾತ್ರ ।। ಚರಣ ।।
ಗೋಪಾಲದಾರ್ಯರ -
ಪ್ರಿಯ ಸಖನೇ । ವೇಣು ।
ಗೋಪಾಲ ವಿಠಲನೇ -
ಕೈಪಿಡಿದು ಸಲಹೋ ।। ಚರಣ ।।
ವ್ಯಾಸವಿಠಲಗಂಕಿತವ -
ನಿತ್ತ ಧೊರೆಯೇ । ವೇದ ।
ವ್ಯಾಸ ವೇಂಕಟನಾಥನ -
ಭಕ್ತಾಗ್ರಣಿ ವೇಣುಗೋಪಾಲದಾಸರೆ ।। ಚರಣ ।।
****
" ವಿವರಣೆ "
ನಾಕೇಶ = ಶ್ರೀ ಇಂದ್ರದೇವರು
ನಾಕು ಬೀದಿಯ ಜ್ಞಾನ = ನಾಲ್ಕು [ ಚತುರ್ವೇದ ] ವೇದಗಳ ಜ್ಞಾನ
ನಾಕ ಋಷಿ = ಶ್ರೀ ನಾರದ ಮಹರ್ಷಿಗಳು
ಆಚಾರ್ಯ ನಾಗರಾಜು ಹಾವೇರಿ ಗುರು ವಿಜಯ ಪ್ರತಿಷ್ಠಾನ
******