Showing posts with label ತಿಳಿವುದನ್ನಮಯ ಕೋಶಗಳನು jagannatha vittala. Show all posts
Showing posts with label ತಿಳಿವುದನ್ನಮಯ ಕೋಶಗಳನು jagannatha vittala. Show all posts

Saturday, 14 December 2019

ತಿಳಿವುದನ್ನಮಯ ಕೋಶಗಳನು ankita jagannatha vittala

ಜಗನ್ನಾಥದಾಸರು
ತಿಳಿವುದನ್ನಮಯ ಕೋಶಗಳನು
ಇಳೆಯೊಳಚ್ಯುತನ ದಾಸರು ನಿತ್ಯದಲಿ ಪ

ಮೇದಿನಿ ಸಲಿಲನ್ನಮಯ ವಿಹಾಯಸ ವಾಯು
ಮುಖ್ಯಪ್ರಾಣ ಮನೋಮಯಕೆ
ಆದುದು ಮನ ಅಹಂಕಾರ ವಿe್ಞÁನಮಯ
ವೇದ್ಯ ತತ್ತ್ವಾನಂದ ಮಯಕೆ ಅವ್ಯಕ್ತವನು1

ಕೃತಿ ಸಂಕರು
ವಾಸುದೇವ ಮಾಯಾ
ಘನ ಸುಲಕ್ಷಣ ಲಕ್ಷ್ಮೀ ನಾರಾಯಣರು ಮುಖ್ಯ
ರೆನಿಸುವರು ಪಂಚಕೋಶದಲಿ ಎಂದೆಂದೂ 2

ಪ್ರಾಣಾಪಾನ ವ್ಯಾನೋದಾನ ಸಮಾನ ಪಂ
ಚಾನಿಲರೂ ಅಲ್ಲಿಹರು ಮತ್ತು
ದಾನವಾದಿಗಳಿಹರು ಭೂತ ಮಾತ್ರ ಕರ್ಮ
e್ಞÁನೇಂದ್ರಿಯಗಳು ತನ್ನಿಷ್ಟವಾಗಿಹವಲ್ಲಿ 3

ಅಬುಜ ಭವಾಂಡ ಪಿಂಡಾಂಡಕ್ಕೆ ಈ ತತ್ತ್ವ
ಒಂಬತ್ತು ಆವರಣವೆಂದೆನಿಪವು
ಕಂಬುಪಾಣಿಯ ರೂಪ ಲಕ್ಷ್ಮೀ ರೂಪವು ಪಂಚ
ಇಂಬುಗೊಂಡಿಹವು ಚಿಂತಿಪುದು ಭೂಸುರರು 4

ಭೂಶನೇಶ್ವರ ವರುಣ ಸುರನದಿಗಳನ್ನಮಯ
ಕೋಶದೊಳಗಿರುತಿಹರು ಪ್ರಾಣಮಯದಿ
ಮೇಷವಾಹನ ಪ್ರವಹವಾಯು ಪ್ರಾವಹಿ ಮಹಾ
ಕಾಶಾಧಿಪತಿ ಗಣಪರಧಿಪರೆಂದೆನಿಸುವರು 5

ಕಾಮೇಂದ್ರ ಶಿವ ರತೀಂದ್ರಾಣಿ ಪಾರ್ವತಿ ಮುಖ್ಯ
ಈ ಮನೋಮಯಕಧಿಪರೆನಿಸುತಿಹರು
ತಾಮರಸಭವ ವಾಯು ವಾಣಿ ಭಾರತಿ ಮುಖ್ಯ
ಸ್ವಾಮಿಗಳೆನಿಸುವರು ವಿe್ಞÁನಕೋಶದಲಿ 6

ಆನಂದಮಯ ಕೋಶಕಭಿಮಾನಿ
ಶ್ರೀನಿವಾಸನು ಪಂಚರೂಪಾತ್ಮಕಾ
ಈ ನಿರ್ಜರರೊಳಿದ್ದು ತತ್ತದಾಹ್ವಯನಾಗಿ
ಪಾನೀಯಜಾಂಡದೊಳಿಪ್ಪ ಕರುಣೀ 7

ಪೃಥಿವಿ ಗಂಧ ಘ್ರಾಣೋಪಸ್ಥಪ್ಪುರ ಸಂಜೀವಾ
ಪ್ರಥಮ ಕೋಶದಿ ವಾಯು ಅಷ್ಟತತ್ತ್ವ
ದ್ವಿತೀಯ ಕೋಶದಿ ತೇಜರೂಪ ಚಕ್ಷುಪಾದ
ಪ್ರಥಮಾಂಗ ಸ್ಪರ್ಶ ತ್ವಕು ಪಾಣಿ ತತ್ವಗಳಿಹವು 8

ಆಕಾಶ ಶಬ್ದ ಶ್ರೋತ್ರವು ಪಿಂತೆ ಪೇಳ್ದಷ್ಟು
ವಾಕು ಪ್ರಾಣಾದಿ ತತ್ತ್ವ ದ್ವಾದಶ ಕಾಮ
ಶ್ರೀ ಕಂಠ ತತ್ವ ಮನ ಮನೋಮಯದಿ ವಿe್ಞÁನ
ಕಮಲ ಭವ ನಂದ ಮಯತೆ ಅವ್ಯಕ್ತವನು 9

ಸ್ಥೂಲ ದೇಹಕೆ ಇನಿತು ಲಿಂಗ ತನುವಿನಲಿ ತತ್ತ ್ವ
ಜಾಲ ಸೂಕ್ಷ್ಮಗಳಿಹವು ಗುಣ ಭೇದದಿ
ಪೇಳುವೆನು ಅವ್ಯಕ್ತ ಮಹದಹಂಕಾರ ಮನ
ಮೇಳೈಸಿಹವು ಸತ್ವಪರಿ ಭೇದದಲಿ 10

ರಜೋಪರಿಚ್ಛೇದದಲಿ e್ಞÁನ ಕರ್ಮೇಂದ್ರಿಯವು
ರಜನೀ ಗುಣದ ಮಾತ್ರ ಭೂತ ಇಹವು
ಯಜಿಸು ಈ ತತ್ತ್ವ ಮಾನಿ ದಿವಿಜರನರಿತು
ವೃಜಿನವರ್ಜಿತನಾಗಿ ಸುಪದವೈದುವಿ ಮನುಜ11

ಭೂಮ್ಯಭ್ರನ್ನ ಮಯನಳನೀಳಾಗಸ ಪ್ರಾಣ ಮಯ ಮ
ನೋಮಯ ಮಹಾ ಅವ್ಯಕ್ತ
ಸಮ್ಯಗಾನಂದ ವಿe್ಞÁನಮಯನೆನಿಸಿ ಗುರು
ಸಮೀರನೊಳಗಿದ್ದು ಪಾಲಿಸುವ ಜಗವಾ 12

ಪಂಚಕೋಶದ ವಿವರ ತಿಳಿದ ಮಹಾತ್ಮರಿಗೆ
ಕಿಂಚಿತಾದರು ದೋಷ ಬರಲರಿಯದು
ಮಾರ್ಗಣ ಪಿತ ಜಗನ್ನಾಥ ವಿಠಲನು
ಸಂಚತಾಗಾಮಿ ಕರ್ಮಗಳ ಫಲ ಬಿಡಿಸುವನು 13
*********