Showing posts with label ಪೇಳಬಹುದೊಬ್ಬರಿಗೆ ವ್ಯಾಸನೆ ಪೇಳಲು ನಿಮಗೆ ಮಾಡಲಶಕ್ಯವಲ್ಲ vasudeva vittala. Show all posts
Showing posts with label ಪೇಳಬಹುದೊಬ್ಬರಿಗೆ ವ್ಯಾಸನೆ ಪೇಳಲು ನಿಮಗೆ ಮಾಡಲಶಕ್ಯವಲ್ಲ vasudeva vittala. Show all posts

Wednesday, 1 September 2021

ಪೇಳಬಹುದೊಬ್ಬರಿಗೆ ವ್ಯಾಸನೆ ಪೇಳಲು ನಿಮಗೆ ಮಾಡಲಶಕ್ಯವಲ್ಲ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಪೇಳಬಹುದೊಬ್ಬರಿಗೆ ವ್ಯಾಸನೆ

ಪೇಳಲು ನಿಮಗೆ ಮಾಡಲಶಕ್ಯವಲ್ಲ ಪ


ಶ್ರವಣ ಕ್ಷಣಬಿಡದೆ ಮಾಡು ನೀಯೆಂಬಿ

ಶ್ರವಣ ಬವಣೆಯು ಬಲ್ಲರೇ ಬಲ್ಲರೊ

ಶ್ರವಣ ಮತಿಯೆಂದು ವಾಕ್ಯದಿಂದಲಿ ನಿಮಗಿ

ಲ್ಲವರ ಗುರುವಾದಿ ವಾಯು ವಿರಂಚಿಗೆ 1


ಮನನ ಮಾಡೆಂದು ಮಂದಿಗೆ ನೀ ಬೋಧಿಸುವೆ

ಮನನ ನಿಮಗೆ ಎಂದಿಗೆ ಇಲ್ಲವೊ

ಮನನ ಶಾಸ್ತ್ರಗಳ ಮಾಡಿ ಹ್ಯಾಗ ತಿಳಿಯದೊ

ಮನವೆ ಬಲ್ಲುದು ನಿನ್ನ ಮಹಿಮೆ ಎಲ್ಲ 2


ಧ್ಯಾನ ಮಾಡೆಂಬಿ ತಾ ಒಂದೆರೆಡು ವಿಷಯಗಳ

ಜ್ಞಾನ ಬಿಡಲಾರೆನೊ ಬಹಳ ಬಿಡುವೆ

ನೀನು ಒಂದನ್ನ ಒಮ್ಮೆನ್ನ ಬಿಡಲಾರಿಯೊ

ಏನೊ ನೀ ಮಾಡುವುದು ಮಾತ್ರ 3


ನಿನ್ನ ಖಳಗುಣಗಳ ಪರೋಕ್ಷ ನಿಗಮನುದಿನ

ಅನ್ಯ ಸಾಧನಗಳಿಂದಲ್ಲದಾಗಿ

ಚನ್ನಾಯಿತೋ ನಿಮ್ಮ ನಿತ್ಯ ಮುಕುತಿ ಪೂರ್ಣ ತಾ

ಅನ್ಯ ಜನರಿಗೆ ಬಂದ ದಣುವು ತಿಳಿಯೊ 4


ಏಸು ತಾನಂದರು ಖರಿಯ ಪುಸಿವೊಂದಿಲ್ಲ

ಲೇಸು ಕೊಡುವವನೊಬ್ಬನಿಲ್ಲ

ವಾಸುದೇವವಿಟ್ಠಲ ಒಲಿದು ಸಜ್ಜನರಿಂದ

ಈಸು ಸಾಧನೆಗಳಿಂದ ನೀ ಮಾಡಿಸೊ 5

***