Showing posts with label ಗುರುವೆ ವರಹಜೆ ತಟವಾಸಾ ಗುರುವೇ ಪುರಿಮಂತ್ರಾಧೀಶಾ gurugovinda vittala. Show all posts
Showing posts with label ಗುರುವೆ ವರಹಜೆ ತಟವಾಸಾ ಗುರುವೇ ಪುರಿಮಂತ್ರಾಧೀಶಾ gurugovinda vittala. Show all posts

Monday 6 September 2021

ಗುರುವೆ ವರಹಜೆ ತಟವಾಸಾ ಗುರುವೇ ಪುರಿಮಂತ್ರಾಧೀಶಾ ankita gurugovinda vittala

 kruti by ಗುರುಗೋವಿಂದಠಲ (ಮೈಸೂರು)

 ರಾಗ: ಸುರಟಿ ತಾಳ: ಆದಿ


ಗುರುವೆ ವರಹಜೆ ತಟವಾಸಾ 

ಗುರುವೇ ಪುರಿಮಂತ್ರಾಧೀಶಾ


ಆರು ಮೊರೆ ಇಡುವೆನೊ ವರಪದ ಪದುಮಕೆ

ಕರುಣದಲೆಮನ ಹರಿಯಲಿ ಇರಿಸೋ ಅ.ಪ.


ಬಾಗಿ ಭಜಿಪೆ ಗುರುವೇ ಎನ್ನಯ

ರೋಗ ಹರಿಸು ಪ್ರಭುವೇ 

ರಾಘವೇಂದ್ರ ದುರಿತೌಘ ವಿದೂರನೆ 

ಭೋಗಿ ಶಯನ ಪದ ರಾಗದಿ ಭಜಿಸುವ 1

ಭೂತ ಪ್ರೇತ ಬಾಧೇ ಬಿಡಿಸುವ

ಖ್ಯಾತಿ ನಿಮ್ಮದು ತಿಳಿದೇ 

ದೂತರೆನಿಪ ಜನ ಆತುನಿಮ್ಮ ಪದ 

ಪ್ರೀತಿ ಸೇವೆಯಲಿ ಕಾತುರರಿಹರೋ 2

ಮೌನಿವರ್ಯ ನಿನ್ನ ಬೇಡುವೆ

e್ಞÁನ ಭಕುತಿಯನ್ನ 

ದಾನ ಮಾಡಿ ಅe್ಞÁನವನೋಡಿಸೆ 

ಹೀನ ಯೋನಿ ಬರಲೇನು ಅಂಜೆನೂ 3

ಪರಿಮಳಾರ್ಯರೆಂದೂ ನಿಮ್ಮಯ

ಬಿರಿದು ಕೇಳಿ ಬಂದೂ 

ಮೊರೆಯಿಡುವೆ ತವ ಚರಣಾಂಬುರುಹಕೆ 

ಅರಿವನೀಯೊ ತವ ಪರಿಮಳ ಸೊಬಗನು 4

ಗುರು ಸುಧೀಂದ್ರ ಕರಜ ತೋರ್ಪುದು

ಹರಿಯ ಪಾದ ಬಿಸಜ 

ವರ ಸುಹೃದ್ಗ ಗುರುಗೋವಿಂದವಿಠಲನ

ಚರಣ ಸರೋಜವ ನಿರುತ ಭಜಿಪ ಗುರು 5

***


ಗುರುವೇ ವರಹಾಜ  ತಟ  ವಾಸ ಪುರಿ  ಮಂತ್ರದೀಶ || Pa ||


ಅರುಮೊರೆ  ಇಡುವೆನೋ ವರಪದ  ಪಧುಮಕೆ

ಕರುಣದಲ್ಲೇನಾ ಮನ  ಹರಿಯಲ್ಲಿ  ಇರಿಸೋ || A. PA||


ಭಾಗಿ  ಭಜಿಪೇ  ಗುರುವೇ ಎನ್ನಯ ರೋಗ  ಹರಿಸು  ಪ್ರಭುವೇ

ರಾಘವೇಂದ್ರ  ಧುರಿ  ತೌಧಾವಿ  ಧೂರನೇ

ಭೋಗಿ  ಶಯನ  ಪಾಧ ರಾಗಧಿ  ಭಜಿಸುವ || 1 ||


ಭೂತ  ಪ್ರೇತ  ಭಾಧೆ  ಬಿಡಿಸುವ ಛಾತಿ ನಿಮ್ಮದು  ತಿಳಿದೇ

ಭೂತರೆನಿಪ  ಜನ  ಆತು ನಿಮ್ಮಪಧ

ಪ್ರೀತಿ  ಸೇವಯಲ್ಲಿ ತಾತುರರಿಹರೋ || 2 ||


ಮೌನಿವರ್ಯ ನಿನ್ನಾ ಬೇಡುವೆ ಜ್ಞಾನ  ಭಕುತಿಯನ್ನಾ

ಧ್ಯಾನ  ಮಾಡಿ  ಅಜ್ಞ್ಯನವನೋಡಿಸೆ

ಹೀನ  ಯೋನಿ  ಭರಲೇನು  ಅಂಜೇನೋ || 3 ||


ಪರಿಮಳಾರ್ಯರ್ ಎಂದು  ನಿಮ್ಮಯ

ಬಿರುಧು  ಕೇಳಿ  ಬಂದು

ಮೊರಯನಿಡುವೇ  ತವ  ಚರಣಂ  ಬುರುಹಕೆ

ಅರವನೀಯೋ  ತವ  ಪರಿಮಳ  ಸ್ವಭಗನು || 4 ||


ಗುರು  ಸುಧೀಂದ್ರ  ಕರಜ ತೋರ್ಪುದು

ಹರಿಯ  ಪಾದ   ವಿಸಜಾ

ವರ ಸುಹೃಧ್ಗ  ಗುರು  ಗೋವಿಂದ  ವಿಠಲನ

ಚರಣ  ಸರೋಜವ  ನಿರುತ  ಭಾಜಿಪ  ಗುರು || 5 ||

***


guruvE rAghavEMdra  rAghavEMdra

guruvE  varahaja taTha vAsA

puri maMtRAdhIsha


arumore iDuvenO varapada padhamake

karunadal enna mana hariyalli irisO


bhAgi bhajipE guruvE

ennaya rOga harisu prabhuvE

rAghavEMdra durithou dhavi dhUranE

bhOgishayana pAda rAgadhi bhajisuva


bhUta prEta bhAdhe

biDisuva chAthi nimmadu tiLidE

bhUtherenipa jana Athu nimmapadha

prIthi sEvayalli thAthurariharO


mouni varya ninnA

bEDuvE gnana bhakutiyannA

dhAna mADi agnana vanOdisE

hIna yOni bharalEnu anjEnO


parimaLAryar eMdu

nimmaya bhirudhu kELi baMdu

morayaniDuvE tava charanAmburuhake

aravanIyO thava parimaLa swabhaganu


guru sudhIMdra karaja

thOrpudhu hariya pAdha visaja

varadha suhrudhga guru gOviMda viThalana

charana sarOjava nirUpa bhajipa guru

***