ಕಾಖಂಡಕಿ ಶ್ರೀ ಕೃಷ್ಣದಾಸರು
ಜೋಗಿಯ ನೋಡಿರೇ ತಾಪಸ ಯೋಗಿಯ ನೋಡಿರೇ ಆಗಮನುತ ಗುಣಸಾರಸ್ವಾನಂದಶರವಾ ಭುವನದಿಮೆರವಾ ಪ
ಗಿರಿಜೇಶನು ಧರಿಸಿಹ ರುಂಡಮಾಲಾಕೃತಿಯೋ ; ವಿದ್ಯುಲ್ಲತಿಯೋ ಭೂಷಣವೋ ; ತಾರಾಗಣವೋ 1
ಶ್ರೀ ಮಹಾದೇವನ ನಂಜು ಗೊರಳಠವಠವಿಯೋ : ಮೇಘ ಚ್ಛವಿಯೋ ತರಣಿಯ ಸದನೋ ಕಾಮಶಲಭನುಹಿದ ಭಾಲಾಕ್ಷದ ಇರವೋ; ದೀಪಾಂಕುರವೋ; ವ್ಯೋಮನದಿಯ ಆವರಿಸಿಹ ಭವನ ಕಂಜೆಡಿಯೋ: ಹವಳದ ಕುಡಿಯೋ 2
ಕರ ಡಮರದ ನಾದಸ್ಪರಣೋ : ಘನವ್ಯಾಕರಣೋ: ಕರ್ಪುರ ಗಿರಿಯೋ; ಸುರಕುಜ ಪರಿಯೋ: ಗುರವರ ಮಹಿಪತಿ ನಂದನ ತಾರಕ ಶಿವನೋ: ನಿಜ ಬಾಂಧವನೋ 3
***