Showing posts with label ಈ ಪರಿಯ ಸೊಬಗು ಇನ್ನಾವ ಗುರುಗಳಿಗುಂಟು bhupati vittala. Show all posts
Showing posts with label ಈ ಪರಿಯ ಸೊಬಗು ಇನ್ನಾವ ಗುರುಗಳಿಗುಂಟು bhupati vittala. Show all posts

Thursday, 5 August 2021

ಈ ಪರಿಯ ಸೊಬಗು ಇನ್ನಾವ ಗುರುಗಳಿಗುಂಟು ankita bhupati vittala

 ..

kruti by bhupati vittalaru ( kakhandaki Ramacharyaru) 


ಈ ಪರಿಯ ಸೊಬಗು ಇನ್ನಾವ ಗುರುಗಳಿಗುಂಟುಈ ಪರಿಮಳಾರ್ಯ ಗುರುರಾಜಗಲ್ಲದೆ ಪ


ಅರ್ಜುನಪ್ರಿಯ ಸೇವಕನು ಶಂಕುಕರ್ಣನು ಮೊದಲುಅಜನ ಶಾಪವ ತಾಳಿ ದೈತ್ಯರೊಳು ಜನಿಸಿಈ ಜಗದಿ ಸರ್ವತ್ರ ಹರಿಯ ವ್ಯಾಪ್ತಿಯ ತೋರಿನಿಜ ಭಕ್ತನೆನಿಸಿದನು ಪ್ರಹ್ಲಾದನಾಗಿ 1

ದ್ವಾಪರಾಂತ್ಯದಿ ಇವನ ಬಾ'್ಲೀಕನೆಂದೆನಿಸಿಶಾಪಫಲ ಪರಿಹಾರವಾಗಬೇಕಾಗಿ'ಪರೀತ ಬುದ್ಧಿುಂ ಯುದ್ಧವನು ಮಾಡಿ ತಾ-ನಪೇಕ್ಷಿಸಿದ ಭೀಮನಿಂ ಮರಣವನ್ನು 2

ಕಲಿಯುಗದಿ ಭೀಮಸೇನ ಮಧ್ವ ಮುನಿಯಾಗಿಅವತರಿಸಿ ತತ್ವಮತ ಸ್ಥಾಪಿಸಿದನುಬಾ'್ಲೀಕ ಬಾಲಯತಿ ವ್ಯಾಸಮುನಿಯಾಗಿಕರುಣಿಸಿದನು ಕೃಷ್ಣ ಸದ್ಗ್ರಂಥಗಳ ರಚಿಸಿ 3

ವ್ಯಾಸರಾಯರ ಮುಂದೆ ಅವತರಿಸಿ ಗುರುವರ್ಯಶ್ರೀರಾಘವೇಂದ್ರನೆಂದೆನಿಸುತಮಧ್ವಮತ ದುಗ್ಧಾಬ್ಧಿ ಚಂದ್ರಮನು ತಾನಾಗಿಕಲಿಯುಗದ ಕಲ್ಪತರು ಎಂದೆನಿಸಿದ 4

ಅಜನಪ್ರಿಯ ಅಜನ ತಾತನ ಭಕ್ತಅಜಪದಕೆ ಅರ್ಹನೆ ಇವನಂತ (?) ಅಜನ ತಾತನ ಕುಣಿಸಿ ಅಜಕರಾರ್ಚಿತಪೂಜಿಸಿದ ಭೂಪತಿ'ಠ್ಠಲನ ದಾಸ *5

***

ರಾಗ: ಭೂಪ್  ತಾಳ: ಝಂಪೆ 

ಈ ಪರಿಯ ಸೊಬಗು ಇನ್ನಾವ ಗುರುಗಳಿಗುಂಟು

ಈ ಪರಿಮಳಾಚಾರ್ಯ ಗುರುರಾಜರಿಗಲ್ಲದೆ 

ಅಜನ ಪ್ರೀಯ ಸೇವಕನು ಶಂಕುಕರ್ಣನು ಮೊದಲು

ಅಜನ ಶಾಪವ ತಾಳಿ ದೈತ್ಯರೊಳು ಜನಿಸಿ

ಈ ಜಗದಿ ಸರ್ವತ್ರ ಹರಿಯ ವ್ಯಾಪ್ತಿಯ ತೋರಿ

ನಿಜ ಭಕ್ತ ನೆನೆಸಿದನು ಪ್ರಹ್ಲಾದನಾಗಿ  1

ದ್ವಾಪರಾಂತ್ಯದಿ ಇವನೆ ಬಾಹ್ಲೀಕನೆಂದೆನಿಸಿ

ಶಾಪಫಲ ಪರಿಹಾರವಾಗಬೇಕಾಗಿ 

ವಿಪರೀತ ಬುದ್ಧಿಯಿಂ ಯುದ್ಧವನು ಮಾಡಿ ತಾ

ಅಪೇಕ್ಷಿಸಿದನು ಮರಣವನು ಭೀಮಸೇನನಿಂದಾ  2

ಕಲಿಯುಗದಿ ಭೀಮಸೇನನು ಮಧ್ವಮುನಿಯಾಗಿ

ಅವತರಿಸಿ ತತ್ವಮತ ಸ್ಥಾಪಿಸಿದನು

ಬಾಹ್ಲೀಕ ಬಾಲಯತಿ ವ್ಯಾಸಮುನಿಯಾಗಿ

ಶ್ರೀಕೃಷ್ಣನನು ಕುಣಿಸಿ ರಾಜಗುರುವಾದನು   3

ಮುನಿ ಮತ್ತೆ ಅವತರಿಸಿ ಗುರುಸಾರ್ವಭೌಮ

ಶ್ರೀ ರಾಘವೇಂದ್ರನೆಂದೆನಿಸುತ

ಮಧ್ವಮತ ದುಗ್ದಾಬ್ಧಿ ಚಂದ್ರಮನು ತಾನಾಗಿ

ಕಲಿಯುಗದ ಕಲ್ಪತರು ಎಂದೆನಿಸಿದಾ  4

ಅಜನಪ್ರಿಯ ಅಜನ ಪ್ರಾಣದ ಪದಕ

ಅಜಪದಕೆ ಅರ್ಹನೆ ಇವನಂತಹ(?)

ಅಜನತಾತನ ಕುಣಿಸಿ ಅಜಕರಾರ್ಚಿತ

ಪೂಜಿಸಿದ ಭೂಪತಿವಿಠಲನ ದಾಸ 5

***