..
kruti by bhupati vittalaru ( kakhandaki Ramacharyaru)
ಈ ಪರಿಯ ಸೊಬಗು ಇನ್ನಾವ ಗುರುಗಳಿಗುಂಟುಈ ಪರಿಮಳಾರ್ಯ ಗುರುರಾಜಗಲ್ಲದೆ ಪ
ಅರ್ಜುನಪ್ರಿಯ ಸೇವಕನು ಶಂಕುಕರ್ಣನು ಮೊದಲುಅಜನ ಶಾಪವ ತಾಳಿ ದೈತ್ಯರೊಳು ಜನಿಸಿಈ ಜಗದಿ ಸರ್ವತ್ರ ಹರಿಯ ವ್ಯಾಪ್ತಿಯ ತೋರಿನಿಜ ಭಕ್ತನೆನಿಸಿದನು ಪ್ರಹ್ಲಾದನಾಗಿ 1
ದ್ವಾಪರಾಂತ್ಯದಿ ಇವನ ಬಾ'್ಲೀಕನೆಂದೆನಿಸಿಶಾಪಫಲ ಪರಿಹಾರವಾಗಬೇಕಾಗಿ'ಪರೀತ ಬುದ್ಧಿುಂ ಯುದ್ಧವನು ಮಾಡಿ ತಾ-ನಪೇಕ್ಷಿಸಿದ ಭೀಮನಿಂ ಮರಣವನ್ನು 2
ಕಲಿಯುಗದಿ ಭೀಮಸೇನ ಮಧ್ವ ಮುನಿಯಾಗಿಅವತರಿಸಿ ತತ್ವಮತ ಸ್ಥಾಪಿಸಿದನುಬಾ'್ಲೀಕ ಬಾಲಯತಿ ವ್ಯಾಸಮುನಿಯಾಗಿಕರುಣಿಸಿದನು ಕೃಷ್ಣ ಸದ್ಗ್ರಂಥಗಳ ರಚಿಸಿ 3
ವ್ಯಾಸರಾಯರ ಮುಂದೆ ಅವತರಿಸಿ ಗುರುವರ್ಯಶ್ರೀರಾಘವೇಂದ್ರನೆಂದೆನಿಸುತಮಧ್ವಮತ ದುಗ್ಧಾಬ್ಧಿ ಚಂದ್ರಮನು ತಾನಾಗಿಕಲಿಯುಗದ ಕಲ್ಪತರು ಎಂದೆನಿಸಿದ 4
ಅಜನಪ್ರಿಯ ಅಜನ ತಾತನ ಭಕ್ತಅಜಪದಕೆ ಅರ್ಹನೆ ಇವನಂತ (?) ಅಜನ ತಾತನ ಕುಣಿಸಿ ಅಜಕರಾರ್ಚಿತಪೂಜಿಸಿದ ಭೂಪತಿ'ಠ್ಠಲನ ದಾಸ *5
***
ರಾಗ: ಭೂಪ್ ತಾಳ: ಝಂಪೆ
ಈ ಪರಿಯ ಸೊಬಗು ಇನ್ನಾವ ಗುರುಗಳಿಗುಂಟು
ಈ ಪರಿಮಳಾಚಾರ್ಯ ಗುರುರಾಜರಿಗಲ್ಲದೆ ಪ
ಅಜನ ಪ್ರೀಯ ಸೇವಕನು ಶಂಕುಕರ್ಣನು ಮೊದಲು
ಅಜನ ಶಾಪವ ತಾಳಿ ದೈತ್ಯರೊಳು ಜನಿಸಿ
ಈ ಜಗದಿ ಸರ್ವತ್ರ ಹರಿಯ ವ್ಯಾಪ್ತಿಯ ತೋರಿ
ನಿಜ ಭಕ್ತ ನೆನೆಸಿದನು ಪ್ರಹ್ಲಾದನಾಗಿ 1
ದ್ವಾಪರಾಂತ್ಯದಿ ಇವನೆ ಬಾಹ್ಲೀಕನೆಂದೆನಿಸಿ
ಶಾಪಫಲ ಪರಿಹಾರವಾಗಬೇಕಾಗಿ
ವಿಪರೀತ ಬುದ್ಧಿಯಿಂ ಯುದ್ಧವನು ಮಾಡಿ ತಾ
ಅಪೇಕ್ಷಿಸಿದನು ಮರಣವನು ಭೀಮಸೇನನಿಂದಾ 2
ಕಲಿಯುಗದಿ ಭೀಮಸೇನನು ಮಧ್ವಮುನಿಯಾಗಿ
ಅವತರಿಸಿ ತತ್ವಮತ ಸ್ಥಾಪಿಸಿದನು
ಬಾಹ್ಲೀಕ ಬಾಲಯತಿ ವ್ಯಾಸಮುನಿಯಾಗಿ
ಶ್ರೀಕೃಷ್ಣನನು ಕುಣಿಸಿ ರಾಜಗುರುವಾದನು 3
ಮುನಿ ಮತ್ತೆ ಅವತರಿಸಿ ಗುರುಸಾರ್ವಭೌಮ
ಶ್ರೀ ರಾಘವೇಂದ್ರನೆಂದೆನಿಸುತ
ಮಧ್ವಮತ ದುಗ್ದಾಬ್ಧಿ ಚಂದ್ರಮನು ತಾನಾಗಿ
ಕಲಿಯುಗದ ಕಲ್ಪತರು ಎಂದೆನಿಸಿದಾ 4
ಅಜನಪ್ರಿಯ ಅಜನ ಪ್ರಾಣದ ಪದಕ
ಅಜಪದಕೆ ಅರ್ಹನೆ ಇವನಂತಹ(?)
ಅಜನತಾತನ ಕುಣಿಸಿ ಅಜಕರಾರ್ಚಿತ
ಪೂಜಿಸಿದ ಭೂಪತಿವಿಠಲನ ದಾಸ 5
***
No comments:
Post a Comment