..
ಕನಸನು ಕಂಡೆನು ಕೇಳೌ
ಘನ ಶ್ರೀ ಗುರು ಬಂದು ಶಾಸ್ತ್ರ ತತ್ವವ ಪೇಳ್ದಂ
ಮನಸಿನ ಸಂಶಯವಳಿಯಿಸಿ
ತನಯಗೆ ರಾತ್ರಿಯೊಳು ತೋರಿದಂ ಸತ್ಪಥಮಂ ಕಂದ
ಕನಸನು ಕಂಡೆನು ಕೇಳೌ ಶ್ರೀಗುರುಭರದಿಂ ತಾ ಬಂದೂ ಪ
ತನಯನ ಸಂಶಯವಳಿಯಿಸಿ ಪರತರ
ಗತಿಯನು ತಾ ಕೊಡುವ ಅ.ಪ
ಶ್ರೀಹರಿ ಪೂಜೆಯು ಸ್ತೋತ್ರವು ಚಿಂತನೆ-ಶ್ರೀಹರಿಮಂತ್ರವನೂ
ಶ್ರೀಹರಿ ಲಾಂಛನ ಧರಿಸುತ ಸಂತತ ವಿಠಲನ ಭಜಿಸೆಂದು 1
ಬಂಧುರದೇಗುಲ ವರಕ್ಷೇತ್ರದೊಳಾನಂದವನೋಡುತಲೀ
ನಿಂದಿಹ ಪರಿಪರಿ ಸಾಧುವೈಷ್ಣವರಿಗೊಂದನೆಮಾಡೆಂದ 2
ಸತ್ಯಪ್ರಬಂಧವು ಅಷ್ಟಾಕ್ಷರಿಜಪತತ್ವ ಸುದ್ವಯಮಂತ್ರ
ನಿತ್ಯಹೃದಯದೊಳು ಸೋಹಂಭಾವದಿ ಭಕ್ತಿಯೊಳ್ಬೆರೆಯೆಂದ 3
ವರಮಹದೇವನ ಪುರಶ್ರೀರಂಗನಚರಣವ ಗುರಿಮಾಡೀ
ಮರೆಯದೆ ಧ್ಯಾನಿಸು ನಾನೇ ನಿನ್ನನು ಪೊರೆಯುವೆನೆಂತೆಂದ 4
***
No comments:
Post a Comment