Showing posts with label ಗುರುವಿನ ಒಲುಮೆಯು ಆಗುವ ತನಕದೊರೆಯ purandara vittala. Show all posts
Showing posts with label ಗುರುವಿನ ಒಲುಮೆಯು ಆಗುವ ತನಕದೊರೆಯ purandara vittala. Show all posts

Thursday, 5 December 2019

ಗುರುವಿನ ಒಲುಮೆಯು ಆಗುವ ತನಕ ದೊರೆಯ purandara vittala

ಪುರಂದರದಾಸರು
ಗುರುವಿನ ಒಲುಮೆಯು ಆಗುವ ತನಕ |ದೊರೆಯದಣ್ಣ ಮುಕುತಿ ಪ.

ಪರಿಪರಿ ಶಾಸ್ತ್ರವನೇಕವನೋದಿ |ವ್ಯರ್ಥವಾಯಿತು ಭಕುತಿ ಅಪ

ಆರು ಶಾಸ್ತ್ರಗಳನೋದಿದರೇನು |ಮೂರಾರು ಪುರಾಣವ ಮುಗಿಸಿದರೇನು ||ಸಾರಿ ಸಜ್ಜನರ ಸಂಗವ ಮಾಡದೆ |ಧೀರನಾಗಿ ತಾ ಮೆರೆದರೇನು ? 1

ಕೊರಳೊಳು ಮಾಲೆಯ ಧರಿಸಿದರೇನು |ಕರದಲಿ ಜಪಮಣಿ ಎಣಿಸಿದರೇನು ||ಮರುಳನಂತೆ ತಾ ಶರೀರಕೆ ಬೂದಿಯ |ಒರಸಿಕೊಂಡು ತಾ ತಿರುಗಿದರೇನು 2

ನಾರಿಯರ ಸಂಗವ ಅಳಿದರೇನು|ಶರೀರಕೆ ದುಃಖವ ಪಡಿಸಿದರೇನು|ಮಾರಯ್ಯ ಶ್ರೀ ಪುರಂದರವಿಠಲನ |ಮರೆಯದೆ ಮನದೊಳು ಬೆರೆಯುವ ತನಕ 3
**********