ಕಾಖಂಡಕಿ ಶ್ರೀ ಕೃಷ್ಣದಾಸರು
ನಡೀರೇ ನೋಡುವಾ ಗುರುಮೂರ್ತಿಯಾ | ಮಹಿಪತಿಯಾ | ತಡೆಯದೇ ಸಖಿಯರು ಪ
ಪೊಡವಿಯೊಳಾನಂದ ಸ್ಥಿತಿಯಾ | ವರ ಯತಿಯಾ | ಅಡಿ ಕಮಲವ ಪಿಡಿದು | ಜಡಿದಿಟ್ಟು ಸದ್ಭಾವರತಿಯಾ | ಕರ ಮುಗಿದು 1
ಷೋಡಶ ಪರಿಸೇವೆ ಮಾಡುವಾ | ಪಾಡುವಾ | ನೋಡದೆಲೆ ಎಡ ಬಲವಾ | ಪಡ ಕೊಂಬಷ್ಟು ಸುಖವಾ 2
ಶರಣ ಬಂದ ವರಂಗೀಕಾರವಾ |ಮಾಡಿ ಹೊರವಾ | ದೋರಿ ಸನ್ಮಾರ್ಗ ಪೂರ್ಣಾ | ವರನಿಗಮದರ್ಥ ಸಾರವಾ | ನೋಡಿ ಬೀರುವಾ | ಕರುಣಿಪ ಕೃಷ್ಣನ ಪ್ರೀಯನಾ3
***