Wednesday, 1 September 2021

ನಡೀರೇ ನೋಡುವಾ ಗುರುಮೂರ್ತಿಯಾ ಮಹಿಪತಿಯಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನಡೀರೇ ನೋಡುವಾ ಗುರುಮೂರ್ತಿಯಾ | ಮಹಿಪತಿಯಾ | ತಡೆಯದೇ ಸಖಿಯರು ಪ 


ಪೊಡವಿಯೊಳಾನಂದ ಸ್ಥಿತಿಯಾ | ವರ ಯತಿಯಾ | ಅಡಿ ಕಮಲವ ಪಿಡಿದು | ಜಡಿದಿಟ್ಟು ಸದ್ಭಾವರತಿಯಾ | ಕರ ಮುಗಿದು 1 

ಷೋಡಶ ಪರಿಸೇವೆ ಮಾಡುವಾ | ಪಾಡುವಾ | ನೋಡದೆಲೆ ಎಡ ಬಲವಾ | ಪಡ ಕೊಂಬಷ್ಟು ಸುಖವಾ 2 

ಶರಣ ಬಂದ ವರಂಗೀಕಾರವಾ |ಮಾಡಿ ಹೊರವಾ | ದೋರಿ ಸನ್ಮಾರ್ಗ ಪೂರ್ಣಾ | ವರನಿಗಮದರ್ಥ ಸಾರವಾ | ನೋಡಿ ಬೀರುವಾ | ಕರುಣಿಪ ಕೃಷ್ಣನ ಪ್ರೀಯನಾ3

***


No comments:

Post a Comment