ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ಮೂರುತಿಯ ತೋರಸೋ | ರಂಗಯ್ಯಾ ಪ
ನಿನ್ನ ಮೂರುತಿಯ ತೋರಿಸೆನ್ನ ಕಂಗಳಿಗೆ ದಯ | ವನ್ನು ಬೀರಿ ಭವಭಯ ಬನ್ನವನು ಬಿಡಸೋ ರಂಗಯ್ಯಾ ಅ.ಪ.
ಅರುಣನಖಾಂಗುಲಿ ಹೊಳೆವಾ | ಕೋಮಲ ಪಾದಾ| ಎರಡು ಜಂಘೆ ಜಾನುರವಾ |ಕಟಿ ಜಗದು | ದರನಾಭಿ ಸಿರಿವತ್ಸವಾ | ಕಂಬುಗ್ರೀವದ | ಕರಚತುಷ್ಟಯ ಮೆರೆವಾ | ಕರುನಗೆದಂತಾ | ಧರಮಿರುಪಕದಪುಶೃತಿ | ಅರಗಂಗಳನಾಸಾ | ಪೆರೆ ನೋಸಳಲಳಕದಾ ರಂಗಯ್ಯಾ 1
ಕೌಸ್ತುಭ ಕೇಯೂ | ರನ್ನು ತೋಳಬಂದಿ ಸ್ಪುರದಾ | ಕಡಗ ಮುದ್ರಾಂ | ಅಂದುಗೆ ಗೆಜ್ಜೆ | ನೀಲ ಪರಿ ಮಂದ ಮತಿಯೆನ್ನದೆ ಕರುಣಿಸಿ ರಂಗಯ್ಯಾ2
ನಿನ್ನ ಕಳೆಗಳ ತೋರಿಸಿ | ಹಮ್ಮಮತೆಯಾ | ಮನ್ನೀನವಗುಣ ಬಿಡಸೆ | ಸಂತರ ಕೈಯಾ | ಅನುದಿನ ಒಪ್ಪಿಸಿ | ಸನ್ನುತ ಮಹಿಪತಿ | ಚಿನ್ನನೊಡೆಯನೇ ಬಹ | ಜನ್ಮ ಜನ್ಮಾಂತರದಲಿ ತನ್ನವನೆಂದೆನಿಸಿ 3
***