Showing posts with label ಎತ್ತಿರೇ ನವರತ್ನದಾರುತಿ ಕರ್ತೃರಂಗನ ರಾಣಿಗೆ bheemesha krishna. Show all posts
Showing posts with label ಎತ್ತಿರೇ ನವರತ್ನದಾರುತಿ ಕರ್ತೃರಂಗನ ರಾಣಿಗೆ bheemesha krishna. Show all posts

Friday, 27 December 2019

ಎತ್ತಿರೇ ನವರತ್ನದಾರುತಿ ಕರ್ತೃರಂಗನ ರಾಣಿಗೆ ankita bheemesha krishna

ಎತ್ತಿರೇ ನವರತ್ನದಾರುತಿ ಕರ್ತೃರಂಗನ ರಾಣಿಗೆ||ಪ||

ಉತ್ತಮೋತ್ತಮಲೋಲನಾದ ವಿಷ್ಣುವಿನ ಕಲ್ಯಾಣಿಗೆ||ಅ.ಪ||

ಶುದ್ಧ ಸ್ನಾನವ ಮಾಡಿ ನದಿಯಲಿ ವಜ್ರಪೀಠದಿ ಕುಳಿಸಿರೇ|
ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳಗೌರಿಗೆ||1||

ಎರೆದು ಪೀತಾಂಬರವನುಡಿಸಿ ಸರ್ವಾಭರಣವನಿಡಿಸಿರೇ|
ಹರಳಿನೋಲೆ ಮೂಗುತಿ ಇಟ್ಟ ಮುದ್ದು ಮಹಾಲಕ್ಷ್ಮೀ ದೇವಿಗೆ||2||

ಅಚ್ಚಮಲ್ಲಿಗೆ ಲಕ್ಷ ಸಂಪಿಗೆ ಎತ್ತಿರೇ ನಿಮ್ಮ ಪಾದಕೆ|
ಉತ್ತಮೋತ್ತಮಲೋಲನಾದ ವಿಷ್ಣುವಿನ ಕಲ್ಯಾಣಿಗೆ||3||

ಹರಿಯ ವಂಚಿಸಿ ಕರವೀರದೊಳು ಭರದಿ ಸ್ಥಿರವಾಗಿರುವೊಳೇ|
ಪರಮಭಕ್ತರಿಗೆ ವರವ ಕೊಡುವ ನಿಗರ್ವಿಗೊಲಿಯುವ ದೇವಿಗೆ||4||

ಹುಟ್ಟು ಬಡವಿಯ ಕಷ್ಟ ಕಳೆದು ಕೊಟ್ಟಳರಸನ ಸಿರಿಯನು|
ಹೆತ್ತಕುವರನ ತೋರಿದಂಥ ಶುಕ್ರವಾರದ ಗೌರಿಗೆ||5||

ನಿಗಮವೇದ್ಯಳೇ ನಿನ್ನ ಮಹಿಮೆಯ ಬಗೆಬಗೆಯಿಂದಲಿ ಪೊಗಳುವೆ|
ತೆರೆದು ಭಾಗ್ಯವ ನೀಡುವಂಥ ಭೀಮೇಶಕೃಷ್ಣನ ಮಡದಿಗೆ||6|
********