Showing posts with label ನರಸಿಂಹ ನೆಂಬೋ ದೇವನ ನಂಬಿದಂಥ purandara vittala. Show all posts
Showing posts with label ನರಸಿಂಹ ನೆಂಬೋ ದೇವನ ನಂಬಿದಂಥ purandara vittala. Show all posts

Thursday, 5 December 2019

ನರಸಿಂಹ ನೆಂಬೋ ದೇವನ ನಂಬಿದಂಥ purandara vittala

ನರಸಿಂಹ ನೆಂಬೋ ದೇವನ ನಂಬಿದಂಥ 
ನರರಿಗೆಲ್ಲ ವರವ ಕೊಡುವನು ||ಪ||


ಓಂ ನಮಃ ಶಿವಾಯ ಎನುತಲಿ ಅಸುರ 
ತನ್ನ ಸುತಗೆ ಬರೆದು ತೋರಿಸೆಂದನು
ನರಹರಿಯ ನಾಮವನ್ನು 
ನಲಿಯುತಾರೆ ಬರೆಯುತಿರಲು
ಎಡದ ತೊಡೆಯಲಿರುವ ಶಿಶುವ 
ಬಡೆದು ಧರೆಗೆ ನೂಕಿದನು ನರಸಿಂಹ ||೧||


ಕಟ್ಟಿ ಕಂಭವನ್ನೇ ಉರುಳಿಸಿ 
ಅಸುರ ತಾನು ಪಟ್ಟದಾನೆ ಕೈಲಿ ಕೊಲ್ಲಿಸಿ
ಹರಳು ಮನೆಯ ಮಾಡಿ ಸುಟ್ಟು 
ಹುಲಿಯ ಬೋನಿನೊಳಗೆ ಬಿಟ್ಟು
ಯತನವಿಲ್ಲದೆ ಸುತನ ಕರೆದು 
ಶಕ್ತನಾಗಿ ತಾನು ನಡೆದ ನರಸಿಂಹ ||2||

ನಿನ್ನ ದೇವರಿದ್ದ ಎಡೆಯನು ಅಸುರ 
ತಾನು ಸುತಗೆ ಕರೆದು ತೋರಿಸೆಂದನು
ಎನ್ನ ದೇವರಿಲ್ಲದಂತ 
ಎಡೆಗಲುಂಟೀ ಲೋಕದೊಳಗೆ
ಕಂಭದಲ್ಲಿ ಇರುವನೆಂದು ಕೈಯ 
ಮುಗಿದಿ ತೋರಿದನು ನರಸಿಂಹ ||3||

ವಜ್ರಕಂಭವನ್ನು ವದೆಯಲು 
ದೇವ ತಾನು ಉಗ್ರ ಕೋಪವನ್ನು ತಾಳಿದ
ಕಟಕಟೆಂಬ ಧ್ವನಿಯ ಮಾಡಿ
ನಖಗಳಿಂದ ಕರುಳಬಗೆದು
ಕರುಳ ಮಾಲೆಯನ್ನೇ ಧರಿಸಿ 
ಕಂದಭಕ್ತ ನಪ್ಪಿಕೊಂಡ ನರಸಿಂಹ ||4||

ಲಕ್ಷ್ಮಿ ನರಸಿಂಹ ಚರಿತೆಯ ಉದಯ 
ಕಾಲ ಉಚ್ಚರಿಸಿದಂಥ ಮನುಜಗೆ
ಅಷ್ಟ ಐಶ್ವರ್ಯಗಳನು 
ಪುತ್ರಸಂತಾನಗಳನು
ಕೊಟ್ಟು ರಕ್ಷಿಷುವ ನಮ್ಮ 
ಪುರಂದರ ವಿಠ್ಠಲ ರಾಯ ನರಸಿಂಹ ||5||
*********