Showing posts with label ಗತಿಎನಗೆ ನೀವೆ ಗುರು ರಾಘವೇಂದ್ರಾ pandarinatha vittala. Show all posts
Showing posts with label ಗತಿಎನಗೆ ನೀವೆ ಗುರು ರಾಘವೇಂದ್ರಾ pandarinatha vittala. Show all posts

Monday, 6 September 2021

ಗತಿಎನಗೆ ನೀವೆ ಗುರು ರಾಘವೇಂದ್ರಾ ankita pandarinatha vittala

  ankita ಪಂಡರೀನಾಥವಿಠಲ

ರಾಗ: ಬಾಗೇಶ್ರೀ ತಾಳ: [ಖಂಡಛಾಪು]


ಗತಿ ಎನಗೆ ನೀವೆ ಗುರು ರಾಘವೇಂದ್ರಾ 


ಕ್ಷಿತಿಯೊಳಗೆ ಅನ್ಯರನು ಕಾಣೆ ಗುರುರಾಯಾ  ಅ ಪ


ಮಾತೆ ಪಿತ ಗುರು ನೀನೆ ಭ್ರಾತೃ ಬಂಧುವು ನೀನೇ

ಸೀತೆ ಪತಿ ಶ್ರೀರಾಮ ದೂತನ ದೂತಾ

ನಾಥ ನಿನ್ನನು ಭಜಿಪೆ ಪ್ರೀತಿಯಲಿ ಪೋಷಿಪುದು

ಖ್ಯಾತ ನರಹರಿ ಭಜಕ ಬಿಡಬೇಡ ಬೇಡುವೆನು   1

ಮಂತ್ರಾಲಯವಾಸ ತಂತ್ರಗಳ ನಾ ತಿಳಿಯೆ

ಚಿಂತಿಸುವೆ ಅನುಗಾಲ ಹೃದಯದೊಳು ಇಟ್ಟು

ಕಂತುಪಿತ ಶ್ರೀಕಾಂತ ನಿನ್ನಲ್ಲಿ ಇರುತಿಹನು

ಚಿಂತೆ ತಪ್ಪಿಸಿ ಎನ್ನ ಕಾಯುವುದು ಪೇಳೋ  2

ಕರುಣೆಯಲಿ ನಿನಗೆಣೆಯ ಕಾಣೆ ನಾ ಜಗದೊಳಗೆ

ಗುರುರಾಯ ಅನುಗ್ರಹಿಸು ದಯದಲ್ಲಿ ಬೇಗ

ನಿರುತ ಭಕ್ತಿ ಜ್ಞಾನ ವೈರಾಗ್ಯ ಕರುಣಿಸು

ದೊರೆ ಪಂಢರಿನಾಥವಿಠಲನ ದಾಸಾ  3

***