ankita ಪಂಡರೀನಾಥವಿಠಲ
ರಾಗ: ಬಾಗೇಶ್ರೀ ತಾಳ: [ಖಂಡಛಾಪು]
ಗತಿ ಎನಗೆ ನೀವೆ ಗುರು ರಾಘವೇಂದ್ರಾ ಪ
ಕ್ಷಿತಿಯೊಳಗೆ ಅನ್ಯರನು ಕಾಣೆ ಗುರುರಾಯಾ ಅ ಪ
ಮಾತೆ ಪಿತ ಗುರು ನೀನೆ ಭ್ರಾತೃ ಬಂಧುವು ನೀನೇ
ಸೀತೆ ಪತಿ ಶ್ರೀರಾಮ ದೂತನ ದೂತಾ
ನಾಥ ನಿನ್ನನು ಭಜಿಪೆ ಪ್ರೀತಿಯಲಿ ಪೋಷಿಪುದು
ಖ್ಯಾತ ನರಹರಿ ಭಜಕ ಬಿಡಬೇಡ ಬೇಡುವೆನು 1
ಮಂತ್ರಾಲಯವಾಸ ತಂತ್ರಗಳ ನಾ ತಿಳಿಯೆ
ಚಿಂತಿಸುವೆ ಅನುಗಾಲ ಹೃದಯದೊಳು ಇಟ್ಟು
ಕಂತುಪಿತ ಶ್ರೀಕಾಂತ ನಿನ್ನಲ್ಲಿ ಇರುತಿಹನು
ಚಿಂತೆ ತಪ್ಪಿಸಿ ಎನ್ನ ಕಾಯುವುದು ಪೇಳೋ 2
ಕರುಣೆಯಲಿ ನಿನಗೆಣೆಯ ಕಾಣೆ ನಾ ಜಗದೊಳಗೆ
ಗುರುರಾಯ ಅನುಗ್ರಹಿಸು ದಯದಲ್ಲಿ ಬೇಗ
ನಿರುತ ಭಕ್ತಿ ಜ್ಞಾನ ವೈರಾಗ್ಯ ಕರುಣಿಸು
ದೊರೆ ಪಂಢರಿನಾಥವಿಠಲನ ದಾಸಾ 3
***
No comments:
Post a Comment