..
kruti by Nidaguruki Jeevubai
ಮಂಗಳವೆನ್ನಿರೆ ಮದನಗೋಪಾಲನಿಗೆ
ಮಂಗಳವೆನ್ನಿರೆ ಮಾಧವಗೆ ಪ
ಮಂಗಳವೆನ್ನಿರೆ ಮಾಮನೋಹರನಿಗೆ
ಮಂಗಳವೆನ್ನಿರೆ ಮುರಹರಗೆ ಅ.ಪ
ಭುವನಮೋಹನ ಶಾಮಲಸುಂದರಾಂಗಗೆ
ಅಮಿತಪರಾಕ್ರಮ ಅಚ್ಚುತಗೆ
ನವನವಲೀಲೆಯ ತೋರಿದ ದೇವಗೆ
ಸುವಿನಯದಿಂದ ಶ್ರೀ ಶ್ರೀಧರಗೆ1
ಶಂಖು ಚಕ್ರಪೀತಾಂಬರಧಾರಿಗೆ
ಬಿಂಕದಿಂದ ಮುರಳಿಯನೂದಿದಗೆ
ಶಂಕರಾದಿ ಸುರಸೇವಿತಗೆ ನಿಷ್ಕ-
ಳಂಕದಿ ಭಜಿಪರ ಪೊರೆದವಗೆ2
ಪರಿಪರಿ ವಿಧದಲಿ ಹರಿ ಸ್ಮರಣೆಯ ಮಾಡೆ
ಪರಾಭವನಾಮ ಸಂವತ್ಸರದಿ
ದುರಿತಗಳೆಲ್ಲವ ಪರಿಹರಿಸುತ ಕಾಯ್ವ
ಸಿರಿವರ ಕಮಲನಾಭ ವಿಠ್ಠಲನಿಗೆ3
***