Showing posts with label ನಾ ನಿನ್ನ ಮನೆಕೆ ಬಾರೆನೆ ಜಯ ಪಾಂಡುರಂಗ purandara vittala. Show all posts
Showing posts with label ನಾ ನಿನ್ನ ಮನೆಕೆ ಬಾರೆನೆ ಜಯ ಪಾಂಡುರಂಗ purandara vittala. Show all posts

Thursday, 5 December 2019

ನಾ ನಿನ್ನ ಮನೆಕೆ ಬಾರೆನೆ ಜಯ ಪಾಂಡುರಂಗ purandara vittala

ರಾಗ ಸುರುಟಿ ಆದಿ ತಾಳ 

ನಾ ನಿನ್ನ ಮನೆಕೆ ಬಾರೆನೆ, ಜಯ ಪಾಂಡುರಂಗ
ನಾ ನಿನ್ನ ಮನಕೆ ಬಾರೆನೆ ||ಪ||
ನಾ ನಿನ್ನ ಮನಕೆ ಬಾರೆನೆ, ಬಂದರೆ ಈ ಭವದ
ಬಲೆಯೊಳು ಸಿಲುಕುವೆನೆ ||ಅ||

ಕೆಟ್ಟ ಕಿರಾತನ ಬೆಟ್ಟವ
ಸುಟ್ಟು ವಾಳ್ಮೀಕಿ ಮುನಿಯೆನಿಸಿದೆ ||

ಭ್ರಷ್ಟಜಾಮಿಳಗಂತ್ಯಸಮಯದಲ್ಲಿ
ಅಂತಕನ ಬಾಧೆಯ ಬಿಡಿಸಿದೆ ||

ತಂದೆ ತಾಯಿಗಳ ತೊರೆದ ಧ್ರುವನಿಗೆ
ಚಂದದಿಂದ ಮಾರ್ಗವ ತೋರಿದೆ ||

ಪಂಕಜನಾಭನೆ ಕುಬುಜೆಡೊಂಕನೆ ತಿದ್ದಿ
ಸಂಭ್ರಮದಿಂದವಳ ಕೂಡಿದೆ ||

ತೊತ್ತಿನ ಮಗನ ಮನೆಯ ಕುಡುತೆಪಾಲ ಸವಿದು
ಮತ್ತವಗೆ ಮುಕ್ತಿಯ ತೋರಿದೆ ||

ಐದು ಮಂದಿಯ ಕೂಡೆ ಸರಸವೆ ದ್ರೌಪದಿಗೆ
ಬಂದ ಲಜ್ಜೆಯ ಕಾಯಿದೆ ||

ದೀನರುದ್ಧರಿಪ ಪುರಂದರವಿಠಲ
ಏನು ಕಾರಣ ಎನ್ನ ಮರೆತೆ ||
***

pallavi

nA ninna maneke bArene jaya pANDuranga nA ninna manake bArane

anupallavi

nA ninna namake pArane bandare I bhavada baleyoLu silukuvene

caraNam 1

keTTa kirAtana beTTava suTTu vALmIki muniyeniside

caraNam 2

bhraSTajAmiLagandya samayadalli antakana bAdheya biDiside

caraNam 3

tande tAigaLa toreda dhruvanige candadinda mArgava tOride

caraNam 4

pankaja nAbhane kubuje Donkane tiddi sambhramadindavaLa kUDide

caraNam 5

tottina magana maneya kuDude pAla savidu mattavage muktiya tOride

caraNam 6

aidu mandiya kUDe sarasave draupadige banda lajjeya kAyide

caraNam 7

dInaruddaripa purandara viTTala Enu kAraNa enna marede
***