ನಂಬು ನಾರಾಯಣನ ನಂಬೋ ನರಹರಿಯನಂಬಿದಾ ಭಕ್ತರ ಕುಟುಂಬ ಸಾರಥಿಯ ಪ
ಬಲಿ ನಂಬಿ ಪಾತಾಳಲೋಕಕರಸಾದನದೆಕುಲದ ಪ್ರಹ್ಲಾದನು ನಿಜವ ಕಂಡಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದಛಲದ ಪಾರ್ಥನು ನಂಬಿ ವಿಶ್ವರೂಪವ ಕಂಡ1
ಅಂಬರೀಷನು ನಂಬಿ ವೈಕುಂಠವೇರಿದನುಹಂಬಲಿಸಿ ಶಶಿಧರನು ಉರಿಯ ಗೆದ್ದಕುಂಭಿನೀದೇವಿ ತಾ ಬಂಧನವ ಕಳೆದಳುಅಂಬುಜಾಕ್ಷಿ ದ್ರೌಪದಿಯು ಮಾನ ಉಳುಹಿಕೊಂಡಳು 2
ಅತಿ ಭಕುತರಿಗೆ ಮೆಚ್ಚಿ ಗತಿಮೋಕ್ಷವನಿತ್ತನುಮತಿಭ್ರಷ್ಟ ಅಜಮಿಳನ ಉದ್ಧರಿಸಿದನುಕ್ಷಿತಿಯೊಳಗೆ ಕಾಗಿನೆಲೆಯಾದಿಕೇಶವರಾಯಪತಿತ ಪಾವನ ಪರಮಪುರುಷೋತ್ತಮನನು 3
***