ಕಾಖಂಡಕಿ ಶ್ರೀ ಕೃಷ್ಣದಾಸರು
ನರನಾದ ಮ್ಯಾಲ ಹರಿನಾಮ ಜಿವ್ಹೆದಲಿರಬೇಕು ಪ
ಗುರುವಿನ ಬರಣಕ ನಂಬಿರಬೇಕು| ತರಣೋಪಾಯವನರಿಯಲಿ ಬೇಕು| ವಿರತಿಯ ಮಾರ್ಗದಿ ನಡೆಬೇಕು 1
ಪರ ಬೇಕು| ಪಾತಕ ತನವನು ಜರಿಯಲಿಬೇಕು| ಮಾತು ಮಾತಿಗೆ ಹರಿಯೆನಬೇಕು 2
ಶಾಂತಿಯ ಶಮೆದಮೆ ಹಿಡಿಯಲಿಬೇಕು| ಭ್ರಾಂತಿಯ ಕ್ರೋಧವ ನಳಿಯಲಿಬೇಕು| ಸಂತರ ಸಂಗದಲಿರಬೇಕು 3
ತಂದೆ ಮಹಿಪತಿ ದಯ ಪಡಿಬೇಕು| ಬಂದದನುಂಡು ಸುಖದಿರಬೇಕು| ಎಂದೆಂದು ಭಕ್ತಿ ಬಲಿಬೇಕು4
****