ನೀನೇ ಗತಿಯೆನಗೆ ವನಜ ನೇತ್ರೆ ||ಪ||
ಕೈಲಾಸ ಎಂಬೋದು ಕಣ್ಣಿಲಿ ಕಾಣೆ
ಮೈಲುವಾಹನಪಿತ ಎತ್ತ ಪೋದನೊ ಕಾಣೆ ||
ಸತ್ಯಲೋಕವೆಂಬೋದು ಮಿಥ್ಯವಾಗಿತು ಕಾಣೆ
ಎತ್ತ ಪೋದನು ಬ್ರಹ್ಮ ಏನು ಮಾಡಲಿ ಅಮ್ಮ ||
ಸರಸಿಜನಾಭನು ಶರಧಿಯೊಳ್ ಮುಳುಗಿದ
ಪುರಂದರವಿಠಲನ ಕರುಣಕ್ಕೆ ಪಾತ್ರಳೆ ||
***
ರಾಗ ಗಮನಕ್ರಿಯೆ ಮಟ್ಟೆತಾಳ (raga tala may differ in audio)
pallavi
nInE gatiyenage vanaja nEtre
caraNam 1
kailAsa embOdu kaNNili kANe mailu vAhana pita etta bOdano kANe
caraNam 2
satya lOkavembOdu mithyavAgitu kANe etta bOdanu brahma Enu mADali amma
caraNam 3
sarasija nAbhanu sharadhiyoLa muLugida purandara viTTalana karuNakke pAtreLa
***