ಶ್ರೀ ಸ್ವಾಮಿರಾಜಾಚಾರ್ಯ ವೈದ್ಯ (1882-1992) ಸ್ತುತಿ
ಶ್ರೀ ಗುರುಗೋವಿಂದವಿಠಲರು ಶ್ರೀ ವೈದ್ಯರ ಆಧ್ಯಾತ್ಮಿಕ ಭಕ್ತಿಯನ್ನು, ತಾತನವರಿಂದ ಬಂದ ಪಾರಂಪರಿಕ ಜ್ಞಾನದ ಆಸ್ತಿಯನ್ನು ಕಂಡು ತುಂಬಾ ಸಂತಸಪಟ್ಟವರಾಗಿ ವೈದ್ಯರನ್ನು ಅನುಗ್ರಹಿಸಿ ಮುರಳೀವಿನೋದ ವಿಠಲ ಎಂದು ಅಂಕಿತನಾಮ ನೀಡಿದರು...
ಅಂಕಿತೋಪದೇಶದ ಪದ ಹೀಗಿದೆ....
lyrics provided by -Smt. Padma Sirish
***
ಮುರಳಿ ವಿನೋದ ವಿಠಲ ಪೊರೆಯ ಬೇಕಿವನಾ...
ದುರಿತ ದುಷ್ಕೃತವೆಲ್ಲ ದೂರ ಸಾಗಿಸುತಾ ..
ಚಾರು ಯೌವನದಲ್ಲಿ ಪರಿಪರಿಯ ಲೌಕಿಕದಿಮಾರಮಣ
ಸ್ಮೃತಿರಹಿತ ಕರ್ಮವೆಸಗೀಜಾರಿ ಪೋಗಲು
ಆಯು - ಆರಾಧ್ಯ ದೇವತೆಯಚಾರುತರ
ಪೂಜಿಸಲು ಸಾರಿ ಬಂದಿಹನಾ ..
ಹಿಂದೆ ಮಾಡಿರುವ ಬಹು - ಮಂದಿ ಜನಗಳ ಸೇವೆ
ಇಂದಿರೇಶನೆ ನಿನ್ನ ಸೇವೆ
ಎಂದೆನಿಸೀ ,ಇಂದಿರಾರಾಧ್ಯ ಪದ ಚೆಂದದಿಂ ಪೊರೆ ಇವನ
ಮಂದರೋದ್ಧಾರಿ ಹರಿ ಕಂದರ್ಪಪಿತನೇ....
ಧ್ಯಾನ ಯೋಗದಿ ಮನವ ಸಾನುಕೂಲಿಸು ಇವಗೆ
ಮಾನನಿಧಿ ಮಧ್ವಪದ ರೇಣುನಾಶ್ರಯಿಸೀಗಾನದಲಿ
ತವ ಮಹಿಮೆ ಪೊಗಳಿಕೆಯನೆ ಇತ್ತು
ಪ್ರಾಣಾಂತರಾತ್ಮಕನೆ ಪಾಲಿಸೈ ಹರಿಯೆ ...
ದೇವಧನ್ವಂತರಿಯೆ ಪಾವನಾತ್ಮಕ ನಿನ್ನಸೇವೆ ಗಯ್ಯುವವಗಿ -
ನ್ನಾವ ದುರಿತಗಳೋಭಾವದಲಿ ಮೈದೋರಿ
ನೀವೊಲಿದು ತೋದರಂತೆದೇವ
ತವ ದಾಸ್ಯವನು ಇತ್ತಿಹೆನು ಹರಿಯೇ ...
ನಾರಸಿಂಹಾತ್ಮಕನೆ ಕಾರುಣ್ಯದಲಿ ಹೃದಯ-
ವಾರಿರುಹ ಮಧ್ಯದಲಿ ತೋರಿ ತವ ರೂಪ
ಪಾರುಗೈ ಭವವ ಗುರುಗೋವಿಂದ ವಿಠಲನೆಸಾರಿ
ತವ ಪಾದವನು ಪ್ರಾರ್ಥಿಸುವೆ ಹರಿಯೇ.
***